ಹುಬ್ಬಳ್ಳಿ: ಇಲ್ಲಿನ ಅಕ್ಕಿಹೊಂಡದ ಶೆಟ್ಟರ್ ಕಾಲನಿಯಲ್ಲಿ ಕಳೆದ ಶನಿವಾರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ಸಿಲಿಂಡರ್ ಬ್ಲಾಸ್ಟ್.. ಚಿಕಿತ್ಸೆ ಫಲಿಸದೇ ದಂಪತಿ ಸಾವು! - ಸಿಲಿಂಡರ್ ಬಾಸ್ಟ್ನಲ್ಲಿ ದಂಪತಿ ಸಾವು,
ಸಿಲಿಂಡರ್ ಬ್ಲಾಸ್ಟ್ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಿಲಿಂಡರ್ ಬ್ಲಾಸ್ಟ್
ಅಮಿತ್ ಕುಮ್ಸೆ (36) ಹಾಗೂ ಮಂಗಲಾ ಕುಮ್ಸೆ (28) ಮೃತಪಟ್ಟ ದಂಪತಿ. ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಮಕ್ಕಳಾದ ಸಾಯಿರಾಮ್, ಪ್ರಿಯತಮ್ ಸಹ ಗಾಯಗೊಂಡಿದ್ದು, ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.
ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.