ಕರ್ನಾಟಕ

karnataka

ETV Bharat / state

ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ: ನಿರ್ಮಲಾ‌ ಸೀತಾರಾಮನ್

ಇಂದು ನಗರದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಜರುಗಿದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ‌ ಸೀತಾರಾಮನ್ ಆಗಮಿಸಿದ್ದರು.

By

Published : Oct 5, 2019, 3:31 PM IST

Nirmala Sitharaman

ಧಾರವಾಡ:ನೋಟು ಅಮಾನ್ಯೀಕರಣದ ನಂತರ ದೇಶದ ಆರ್ಥಿಕ ಸ್ಥಿತಿ ಸುಧಾರಣಗೆ ಬಂದಿದೆ. ಅದಕ್ಕೂ ಮೊದಲು ಶೇ.85ರಷ್ಟು ಆರ್ಥಿಕ ವ್ಯವಹಾರ ಲೆಕ್ಕದಲ್ಲೇ ಇರುತ್ತಿರಲಿಲ್ಲ ಎಂದು‌ ವಿತ್ತ ಸಚಿವೆ ನಿರ್ಮಲಾ‌ ಸೀತಾರಾಮನ್​ ಹೇಳಿದರು.

ನಗರದ ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಜರುಗಿದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ದೇಶಕ್ಕೆ ತೆರಿಗೆ ಬರುತ್ತಲೇ ಇರಲಿಲ್ಲ. ಜಿಎಸ್​ಟಿ ಜಾರಿಗೆ ತಂದಿದ್ದರಿಂದ ದೇಶಕ್ಕೆ ‌ತೆರಿಗೆ ಬರುತ್ತಿದ್ದು, ಎಲ್ಲವೂ ಸರಿ ದಾರಿಗೆ ಬಂದಿದೆ ಎಂದು ತಿಳಿಸಿದರು.

ವಿತ್ತ ಸಚಿವೆ ನಿರ್ಮಲಾ‌ ಸೀತಾರಾಮನ್​

ಜಿಎಸ್​ಟಿ ಜಾರಿಯಾಗುವ ಮೊದಲು ಗ್ರಾಹಕರು ಹಲವು ಹಂತಗಳಲ್ಲಿ ತೆರಿಗೆ ಕಟ್ಟಬೇಕಿತ್ತು.‌ ಆದರೆ, ಜಿಎಸ್​ಟಿಯಿಂದ ತಾಂತ್ರಿಕವಾಗಿ ಅನುಕೂಲವಾಗಿದೆ. ಇದೀಗ ಒಂದು ದೇಶ, ಒಂದು ತೆರಿಗೆ ಜಾರಿಗೆ ಬಂದಿದೆ. ದೇಶಕ್ಕಾಗಿ ಏನಾದರೂ ಮಾಡಬೇಕಾದರೆ ಅದಕ್ಕೆ ಆದಾಯ ತೆರಿಗೆಯಿಂದಲೆ ಬರಬೇಕು. ಇದರಿಂದ ಬಂದ ಹಣದಲ್ಲಿ ನಾವು ಅನೇಕ ಕಾರ್ಯಗಳನ್ನು ಮಾಡಬೇಕಾಗುತ್ತದೆ. ತೆರಿಗೆ ಸರಿಯಾಗಿ ನಡೆದರೆ ತಾನಾಗಿಯೇ ದೇಶ ಸರಿಯಾಗಿ ನಡೆಯುತ್ತದೆ. ಈ ಹಿಂದೆ ಆ. 05ಕ್ಕೆ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿತ್ತು. ಆದ್ರೆ ಕೆಲಸದ ಒತ್ತಡದಿಂದ ಬರಲಾಗಿರಲಿಲ್ಲ. ಜಿಎಸ್​ಟಿ ಅತ್ಯಂತ ಪ್ರಮುಖವಾಗಿ ತಾಂತ್ರಿಕತೆಯಿಂದ ಕೆಲಸ ಮಾಡುತ್ತಿದೆ. ಕಂಪನಿಯಿಂದ ಹಿಡಿದು ಗ್ರಾಹಕನವರೆಗೂ ತೆರಿಗೆ ಎನ್ನುವುದು ಚೈನ್ ರೀತಿಯಲ್ಲಿ ಇದ್ದೆ ಇರುತ್ತೆ ಎಂದರು.

ದೇಶದ ಆದಾಯ ಮೂಲ ತೆರಿಗೆ. ಅದು ನಿಮ್ಮಂತಹ ತೆರಿಗೆ ಸಂಗ್ರಹಕಾರರಿಂದ ಸಾಧ್ಯವಾಗುತ್ತೆ.‌ ತೆರಿಗೆ ಸಂಗ್ರಹಕಾರರಿಗೆ ದೊಡ್ಡ ಜವಾಬ್ದಾರಿ ಇದೆ. ಬಹಳಷ್ಟು ಜನರು ಸ್ವಲ್ಪ ಮಟ್ಟದ ತೆರಿಗೆ ಕಟ್ಟಿದ್ರೆ, ಆರ್ಥಿಕತೆಗೆ ಅನುಕೂಲ ಆಗುತ್ತೆ ಎಂದ ಸಚಿವೆ, ಶಾಸ್ತ್ರೀಯ ಸಂಗೀತದ ಊರು ಧಾರವಾಡಕ್ಕೆ ಆಹ್ವಾನ ಮಾಡಿರುವುದಕ್ಕೆ ಆಯೋಜಕರಿಗೆ ಧನ್ಯವಾದ ತಿಳಿಸಿದರು.

ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ABOUT THE AUTHOR

...view details