ಹುಬ್ಬಳ್ಳಿ:ಕಳೆದೆರಡು ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರ ನಡೆಸಿಕೊಂಡು ಬಂದಿದ್ದ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾತ್ರ ಬಾಕಿ ಉಳಿದಿದೆ.
82 ವಾರ್ಡ್ಗಳ ಪೈಕಿ ಬಿಜೆಪಿ39, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3, ಪಕ್ಷೇತರ 6 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇವರಲ್ಲಿ ಯಾರಿಗೆ ಮೇಯರ್ ಪಟ್ಟ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮೇಯರ್ ಹಾಗೂ ಉಪ ಮೇಯರ್ ಚುನಾವಣಾ ಪ್ರಕ್ರಿಯೆಯು ಪ್ರಾದೇಶಿಕ ಆಯುಕ್ತರ ನಿರ್ದೇಶನದಲ್ಲಿ ನಡೆಯಲಿದೆ. ಆಯ್ಕೆಗೆ ದಿನಾಂಕ ಘೋಷಣೆ ಆಗಬೇಕಿದೆ.
ಹು-ಧಾ ಮಹಾನಗರ ಪಾಲಿಕೆ ಗದ್ದುಗೆ ಯಾರಿಗೆ? ಇದಕ್ಕಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ ಮೇಲೆ ಕ್ರಮಬದ್ಧವಾಗಿ ನಾಮಪತ್ರಗಳ ಸಲ್ಲಿಕೆ, ನಾಮಪತ್ರಗಳ ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಲಿದೆ.
ಇದರಲ್ಲಿ ಪಾಲಿಕೆ ವ್ಯಾಪ್ತಿಯ ಎಂಎಲ್ಎಗಳು, ಎಂಎಲ್ಸಿಗಳು, ಎಂಪಿ ಕೂಡ ಮತ ಚಲಾವಣೆ ಮಾಡಬೇಕಿರೋದರಿಂದ ಪಾಲಿಕೆ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರ ಅಧಿಸೂಚನೆಗೆ ಕಾಯುತ್ತಿದ್ದಾರೆ.
ಇದನ್ನೂ ಓದಿ:ಸಾಲ ಪಡೆದದ್ದು ₹14 ಲಕ್ಷ, ಬ್ಯಾಂಕ್ ಕೊಟ್ಟ ಲೆಕ್ಕ ₹95 ಲಕ್ಷ: ನೋಟಿಸ್ ಪಡೆದ ಗುಂಡ್ಲುಪೇಟೆ ರೈತ ಕಂಗಾಲು