ಹುಬ್ಬಳ್ಳಿ :ಧಾರವಾಡ ಮಹಾನಗರ ಪಾಲಿಕೆಯ ನಿವೃತ್ತ ವಲಯ ಸಹಾಯಕ ಆಯುಕ್ತ ಪ್ರಕಾಶ್ ಗಾಳೆಮ್ಮನವರ್, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮುಖದಲ್ಲಿ ಇಂದು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾದರು. ಡಿಕೆ ಶಿವಕುಮಾರ್ ಗಾಳೆಮ್ಮನವರ್ಗೆ ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.
1984ರಲ್ಲಿ ಟೈಪಿಸ್ಟ್ ಆಗಿ ಪಾಲಿಕೆಯಲ್ಲಿ ನೇಮಕಗೊಂಡಿದ್ದ ಗಾಳೆಮ್ಮನವರ್ ಸುಮಾರು 40 ವರ್ಷಗಳ ಅವರ ಸುದೀರ್ಘ ಸೇವೆಯಲ್ಲಿ ಡಿಸಿ ಕಂದಾಯ, ಕೌನ್ಸಿಲ್ ಕಾರ್ಯದರ್ಶಿ, ವಲಯ ಸಹಾಯಕ ಆಯುಕ್ತ, ಚುನಾವಣಾ ಕರ್ತವ್ಯ ಮತ್ತು ಅನೇಕ ಇತರ ಅಧಿಕೃತ ಜವಾಬ್ದಾರಿಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.