ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾದ ಘಟನೆ ನಗರದಲ್ಲಿ ನಡೆದಿದೆ. ಧಾರವಾಡದ ನವಲೂರಿನಲ್ಲಿ 6 ನಾಯಿಗಳ ಕಾಲು ಮತ್ತು ಬಾಯಿಯನ್ನು ಕಟ್ಟಿ ಟಂ ಟಂ ವಾಹನಕ್ಕೆ ಹಾಕಿ, ಅವುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ.
ನಾಯಿಗಳನ್ನು ಕೊಲ್ಲಲು ಮುಂದಾದ ಹು-ಧಾ ಪಾಲಿಕೆ: ರಕ್ಷಿಸಿ ಚಿಕಿತ್ಸೆ ಕೊಡಿಸಿದ್ರು ಶ್ವಾನಪ್ರಿಯ - ಪ್ರಾಣಿ ಪ್ರಿಯ ಸೋಮಶೇಖರ್ ಚನಶೆಟ್ಟಿರಿಂದ ರಕ್ಷಣೆ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಬೀದಿ ನಾಯಿಗಳನ್ನು ಕೊಲ್ಲಲು ಮುಂದಾಗಿದ್ದು, ಅವುಗಳನ್ನು ಶ್ವಾನ ಪ್ರಿಯರಾದ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ.
ನಾಯಿಗಳನ್ನು ಕೊಲ್ಲಲು ಮುಂದಾದ ಪಾಲಿಕೆ
6 ಶ್ವಾನಗಳಲ್ಲಿ ಐದನ್ನು ಪ್ರಾಣಿ ಪ್ರಿಯ ಸೋಮಶೇಖರ್ ಚನಶೆಟ್ಟಿ ರಕ್ಷಣೆ ಮಾಡಿದ್ದಾರೆ. ನಾಯಿಪ್ರಿಯ ಆಗಿರುವ ಸೋಮಶೇಖರ್ 5 ಶ್ವಾನಗಳನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಅವಕ್ಕೆ ಚಿಕಿತ್ಸೆ ಸಹ ಕೊಡಿಸಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗ: ಗುರಾಯಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ