ಧಾರವಾಡ:ರಾಜ್ಯಕ್ಕೆ ಕೊರೊನಾ ವೈರಸ್ ಕಾಲಿಟ್ಟ ಹಿನ್ನೆಲೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ಸೋಂಕಿತರಿಗೆ ಒಂದು ಪ್ರತ್ಯೇಕ ವಾರ್ಡ ವ್ಯವಸ್ಥೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಆಸ್ಪತ್ರೆ ಸರ್ಜನ್ ಶಿವುಕುಮಾರ್ ಮಾನಕರ್ ಹೇಳಿದ್ದಾರೆ.
ರಾಜ್ಯಕ್ಕೆ ಕೊರೋನಾ ವೈರಸ್: ಮುನ್ನೆಚ್ಚರಿಕೆ ವಹಿಸಿದ ಧಾರವಾಡ ಜಿಲ್ಲಾಸ್ಪತ್ರೆ! - Coronavirus alert in Dharwad,
ರಾಜ್ಯಕ್ಕೆ ಕೊರೊನಾ ವೈರಸ್ ಕಾಲಿಟ್ಟ ಹಿನ್ನೆಲೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ಸೋಂಕಿತರಿಗೆ ಒಂದು ಪ್ರತ್ಯೇಕ ವಾರ್ಡ ವ್ಯವಸ್ಥೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಆಸ್ಪತ್ರೆ ಸರ್ಜನ್ ಶಿವುಕುಮಾರ್ ಮಾನಕರ್ ಹೇಳಿದ್ದಾರೆ.
ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ ಎಂದ ಸರ್ಜನ್
ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಕೊಂಡಿದ್ದಾರೆ. ಎನ್ 95 ಮಾದರಿಯ ಮಾಸ್ಕ್ಗಳನ್ನು ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.
ವೈರಸ್ ಪತ್ತೆಯಾದರೆ ಚಿಕಿತ್ಸೆ ನೀಡುವ ವೇಳೆ ಸಿಬ್ಬಂದಿಗೆ ಬಳಸಲು ಮಾಸ್ಕ್ಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ವಾರ್ಡನಲ್ಲಿ 10 ಬೆಡ್ ಮತ್ತು 50 ಕೊರೊನಾ ಪ್ರೋಟೆಕ್ಷನ್ ಜಾಕೆಟ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಜನ್ ಶಿವುಕುಮಾರ್ ಮಾನಕರ್ ಹೇಳಿದ್ದಾರೆ.
Last Updated : Mar 3, 2020, 6:54 PM IST