ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಮಗುವಿಗಾಗಿ ಮಿಡಿದ ಕೊರೊನಾ ಸೇನಾನಿಯ ಮಾತೃ ಹೃದಯ.... - ಮಗುವಿನೊಂದಿಗೆ ಅಂತರ ಕಾಯ್ದುಕೊಂಡ ವೈದ್ಯೆ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ತಮ್ಮ ಪುಟ್ಟ ಮಗುವನ್ನು ಮುಟ್ಟಿ ಮುದ್ದಾಡಲಾಗದೇ ದೂರದಲ್ಲಿ‌ ನಿಂತುಕೊಂಡು ಮಾತನಾಡುವ ದೃಶ್ಯ ಮನಕಲಕುವಂತಿತ್ತು.

Hubli
ಕಿಮ್ಸ್ ಆಸ್ಪತ್ರೆಯ ವೈದ್ಯೆ

By

Published : Jun 30, 2020, 6:31 PM IST

ಹುಬ್ಬಳ್ಳಿ:‌ ನಗರದ ಕಿಮ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ತಮ್ಮ ಪುಟ್ಟ ಮಗುವನ್ನು ಮುಟ್ಟಿ ಮುದ್ದಾಡಲಾಗದೇ ದೂರದಲ್ಲಿ‌ ನಿಂತುಕೊಂಡು ಮಾತನಾಡುವ ದೃಶ್ಯ ಮನಕಲಕುತ್ತಿದೆ.

ನಗರದ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಡಾ. ರುಕ್ಸಾನ ಯೌನುಸ್ ನಜ್ಮಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಒಂದು ವಾರ ಕ್ವಾರಂಟೈನ್​ನಲ್ಲಿ ಇದ್ದರು. ಹೀಗಾಗಿ ಎರಡು ವಾರಗಳ ಕಾಲ ಕುಟುಂಬದವರಿಂದ ದೂರ ಉಳಿದು ಕೊರೊನಾ ಸೇನಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ರುಕ್ಸಾನ ಯೌನುಸ್ ನಜ್ಮಿ ತಮ್ಮ ಮಗಳೊಂದಿಗೆ ಅಂತರ ಕಾಯ್ದಕೊಂಡು ಮಾತನಾಡುತ್ತಿದ್ದ ದೃಶ್ಯ.

ಇನ್ನು ಕೋವಿಡ್ ತಪಾಸಣೆ ನೆಗೆಟಿವ್ ಬಂದ ನಂತರ ಅಧಿಕಾರಿಗಳಲ್ಲಿ ಅನುಮತಿ ಪಡೆದು ಮಕ್ಕಳ ಕೋರಿಕೆಯ ಮೇರೆಗೆ ಬಿಡುವು ಮಾಡಿಕೊಂಡು, ತಮ್ಮ ವಸತಿ ಗೃಹದ ಮುಂದೆ ದೂರದಲ್ಲಿ ನಿಂತು ಅಂತರವನ್ನು ಕಾಪಾಡಿಕೊಂಡು ತನ್ನ ಮಗಳೊಂದಿಗೆ ಮಾತನಾಡಿಸುತ್ತಿರುವ ದೃಶ್ಯ ಮನಕಲಕುವಂತಿದೆ.

ABOUT THE AUTHOR

...view details