ಹುಬ್ಬಳ್ಳಿ: ಕೊರೊನಾ ವೈರಸ್ ಎಫೆಕ್ಟ್ ಹಿನ್ನೆಲೆ ಇದೀಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಈಜು ಕೊಳವನ್ನು ಒಂದು ವಾರ ಬಂದ್ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.
ಈಜು ಕೊಳವನ್ನೂ ಬಿಡದ ಕೊರೊನಾ ವೈರಸ್! - swimming fool closed for one week
ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಎಫೆಕ್ಟ್ ಇದೀಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಈಜು ಕೊಳಕ್ಕೂ ತಟ್ಟಿದೆ.
![ಈಜು ಕೊಳವನ್ನೂ ಬಿಡದ ಕೊರೊನಾ ವೈರಸ್! corona-virus-effects-on-swimming-fool-in-hubli](https://etvbharatimages.akamaized.net/etvbharat/prod-images/768-512-6400532-thumbnail-3x2-sanju.jpg)
ಈಜುಕೊಳವನ್ನು ಬಿಡದ ಕೊರೋನಾ ವೈರಸ್
ಕೊರೊನಾ ಹಿನ್ನೆಲೆಯಲ್ಲಿ ಈಜು ಕೊಳವನ್ನು ಬಂದ್ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಈಗಾಗಲೇ ಸರ್ಕಾರ ಒಂದು ವಾರ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಿದ ಬೆನ್ನಲ್ಲೇ ಇದೀಗ ಮಹಾನಗರ ಪಾಲಿಕೆಯೂ ಈಜುಕೊಳವನ್ನು ಒಂದು ವಾರ ಬಂದ್ ಮಾಡಲಾಗುವುದು ಎಂದು ತಿಳಿಸಿದೆ.
ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ಬೇಸಿಗೆ ಶುರುವಾಗಿದ್ದು ಈಜುಕೊಳ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ.