ಹುಬ್ಬಳ್ಳಿ:ಕೊರೊನಾ ವೈರಸ್ ರಾಜ್ಯವನ್ನು ಬೆಚ್ಚಿಬೀಳಿಸುತ್ತಿದ್ದು, ವೈರಸ್ ಹರಡುವಿಕೆ ತಡೆಗೆ ನೈರುತ್ಯ ರೈಲ್ವೆ ಇಲಾಖೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.
ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್ ತಪಾಸಣಾ ಶಿಬಿರ, ಜಾಗೃತಿ ಅಭಿಯಾನ - corona virus awareness campaign
ಕೊರೊನಾ ಕರಿಛಾಯೆ ಎಲ್ಲೆಡೆ ವ್ಯಾಪಿಸಿದ್ದು, ವೈರಸ್ ಹರಡುವಿಕೆ ತಡೆಗೆ ನೈರುತ್ಯ ರೈಲ್ವೆ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಸ್ ತಪಾಸಣಾ ಶಿಬಿರ ಹಾಗೂ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.
ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್ ತಪಾಸಣಾ ಶಿಬಿರ ಹಾಗೂ ಜಾಗೃತಿ ಅಭಿಯಾನ
ನೈಋತ್ಯ ರೈಲ್ವೆ ವಲಯದಿಂದ ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಸ್ ತಪಾಸಣಾ ಶಿಬಿರ ಹಾಗೂ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ನಗರದ ರೈಲ್ವೆ ನಿಲ್ದಾಣ, ವರ್ಕ್ ಶಾಪ್, ರೈಲ್ ಸೌಧ ಸೇರಿದಂತೆ ನೈಋತ್ಯ ರೈಲ್ವೆಯ ವಿವಿಧ ಕಚೇರಿಯಲ್ಲಿ ಸಿಬ್ಬಂದಿಗೆ ಹಾಗೂ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಲಾಗುತ್ತಿದ್ದು, ರೈಲ್ವೆ ವೈದ್ಯಕೀಯ ವಿಭಾಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ತಪಾಸಣೆ ಮಾಡಲಾಯಿತು.