ಹುಬ್ಬಳ್ಳಿ: ಮದುವೆಗೆಂದು ದುಬೈನಿಂದ ಊರಿಗೆ ಆಗಮಿಸಿದ್ದ ಯುವಕನಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದು, ಇದರಿಂದ ಜನತೆ ಭಯಬೀತರಾದ ಘಟನೆ ಜಿಲ್ಲೆಯ ದೇಶಪಾಂಡೆ ನಗರದಲ್ಲಿ ನಡೆದಿದೆ.
ದುಬೈನಿಂದ ಹುಬ್ಬಳ್ಳಿಗೆ ಬಂದ ಯುವಕನಿಗೆ ಕೊರೊನಾ ಶಂಕೆ? - DC
15 ದಿನಗಳ ಹಿಂದೆ ದುಬೈನಿಂದ ಹುಬ್ಬಳ್ಳಿಗೆ ಬಂದ ಯುವಕನಿಗೆ ಕಳೆದ ಎರಡು ದಿನಗಳಿಂದ ಗಂಟಲು ನೋವು ಹಾಗೂ ನೆಗಡಿ ಹೆಚ್ಚಾಗಿದ್ದು, ಇದರಿಂದ ಭಯಬೀತರಾದ ಜನರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ದುಬೈನಿಂದ ಹುಬ್ಬಳ್ಳಿಗೆ ಬಂದ ಯುವಕನಿಗೆ ಕೊರೊನಾ ಶಂಕೆ

ಬಳಿಕ ಆಂಬ್ಯುಲೆನ್ಸ್ ಮುಖಾಂತರ ಕಿಮ್ಸ್ ಆಸ್ಪತ್ರೆಗೆ ಆತನನ್ನು ಕರೆದೊಯ್ಯಲಾಗಿದೆ. ದುಬೈನಿಂದ ಬರುವಾಗ ವಿಮಾನ ನಿಲ್ದಾಣದದಲ್ಲಿ ಕೋವಿಡ್ 19 ವೈರಸ್ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿತ್ತು. ಸದ್ಯ ವೈದ್ಯಕೀಯ ತಪಾಸಣೆ ನಡೆಸಿ, ಮನೆಯಲ್ಲೇ ಕ್ವಾರೆಂಟೈನ್ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.