ಕರ್ನಾಟಕ

karnataka

ಕೊರೊನಾ ಶಂಕೆ: ಧಾರವಾಡದಲ್ಲಿ 101 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ

By

Published : May 2, 2020, 9:04 PM IST

ಕೊರೊನಾ ಶಂಕೆ ಹಿನ್ನೆಲೆ ಧಾರವಾಡದಲ್ಲಿ ಇಂದು 101 ಮಂದಿ ಶಂಕಿತರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.

Dispatch of 101 people's throat fluid sample test
ಧಾರವಾಡದಲ್ಲಿ 101ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ

ಧಾರವಾಡ: ಜಿಲ್ಲೆಯಲ್ಲಿ ನಿನ್ನೆವರೆಗೆ ದಾಖಲಾಗಿದ್ದ 259 ಕೊರೊನಾ ಶಂಕಿತರ ವರದಿಗಳು ನೆಗೆಟಿವ್ ಬಂದಿವೆ.

ಕೊರೊನಾ ಬುಲೆಟಿನ್​

ಈ ಬಗ್ಗೆ ಜಿಲ್ಲಾಡಳಿತ ಕೊರೊನಾ ಬುಲೆಟಿನ್​ ಬಿಡುಗಡೆ ಮಾಡಿದ್ದು, ಇಂದು 101 ಮಂದಿ ಶಂಕಿತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. 6 ಜನರಿಗೆ ಆಸ್ಪತ್ರೆಯಲ್ಲಿ ಐಸೊಲೇಷನ್ ಇಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 3,342 ಜನರ ಮೇಲೆ‌ ನಿಗಾ ವಹಿಸಲಾಗಿದೆ.

ಒಟ್ಟಾರೆ 2550 ಜನರನ್ನು 14 ದಿನಗಳ ಐಸೊಲೇಷನ್​ನಲ್ಲಿ ಇಡಲಾಗಿದೆ. ಆ ಪೈಕಿ 79 ಜನರ 14 ದಿನಗಳ ಐಸೊಲೇಷನ್ ಹಾಗೂ 707 ಜನರ 28 ದಿನಗಳ ಐಸೊಲೇಷನ್ ಪೂರ್ಣಗೊಂಡಿದೆ.

ABOUT THE AUTHOR

...view details