ಧಾರವಾಡದ ಇಬ್ಬರು ಶಂಕಿತರಲ್ಲಿ ಓರ್ವ ನೆಗೆಟಿವ್, ಇನ್ನೊಂದು ವರದಿ ಬಾಕಿ.. - ಕಳೆದ 24 ಗಂಟೆಯಲ್ಲಿ ಹೊಸ ಕೊರೊನಾ ಶಂಕಿತರ ಕೇಸ್ ಪತ್ತೆಯಾಗಿಲ್ಲಾ
ಈವರೆಗೆ ಒಟ್ಟು 490 ಜನರ ಮೇಲೆ ನಿಗಾವಹಿಸಲಾಗಿದೆ. ಅದರಲ್ಲಿ 157 ಜನರಿಗೆ 14 ದಿನಗಳ ಕಾಲ ಹೋಂ ಕಾರಂಟೈನ್‌ನಲ್ಲಿರಿಸಲಾಗಿದೆ.

ಕೊರೊನಾ
ಧಾರವಾಡ :ಜಿಲ್ಲೆಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರ ಪೈಕಿ ಓರ್ವ ವ್ಯಕ್ತಿ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನೊಬ್ಬತಾನ ಪರೀಕ್ಷಾ ವರದಿ ಇನ್ನೂ ಬಾಕಿಯಿದೆ. ಇದರಿಂದಾಗಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.