ಹುಬ್ಬಳ್ಳಿ: ನಗರದ ಘಂಟಿಕೇರಿಯ ನೆಹರು ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ವಿದ್ಯಾರ್ಥಿಗಳ ಅಧ್ಯಯನ ಸಮಸ್ಯೆಗಳು ಮತ್ತು ಅವಕಾಶಗಳ ಮೇಲೆ ಕೊವಿಡ್-19 ಪ್ರಭಾವ ಕುರಿತು ರಾಷ್ಟ್ರೀಯ ಮಟ್ಟದ ಆನ್‌ಲೈನ್ ಉಪನ್ಯಾಸ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಸ್ಪರ್ಧೆಯಲ್ಲಿ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 51 ವಿದ್ಯಾರ್ಥಿಗಳು ತಮ್ಮ ಭಾಷಣದ ವಿಡಿಯೋ ತುಣುಕುಗಳನ್ನು ವಾಟ್ಸ್ಆ್ಯಪ್ ಮತ್ತು ಮೇಲ್ ಮೂಲಕ ಕಳುಹಿಸಿದ್ದರು. ಆ ಮೂಲಕ ಕೊರೊನಾ ವೈರಸ್ ಶಿಕ್ಷಣದ ಮೆಲೆ ಬೀರಿದ ಪರಿಣಾದ ಬಗ್ಗೆ ವಿದ್ಯಾರ್ಥಿಗಳು ವಿವರಣೆ ನೀಡಿದ್ದರು.
ಉಪನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದವರು ವಿವಿಧ ಕಾಲೇಜಿನ ಮೂವರು ಪ್ರಖ್ಯಾತ ಪ್ರಾಧ್ಯಾಪಕರು ವಿಡಿಯೋ ತುಣುಕುಗಳನ್ನು ನೋಡಿ ನಿರ್ಣಯಿಸಿ ಫಲಿತಾಂಶ ನೀಡಿದ್ದಾರೆ. ಫಲಿತಾಂಶವನ್ನು ವಾಟ್ಸ್ಆ್ಯಪ್ ಮೂಲಕ ಘೋಷಣೆ ಮಾಡಲಾಯಿತು.
ಉಪನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದವರು ಪ್ರಶಸ್ತಿ :
ಪ್ರಥಮ ಬಹುಮಾನ 2000 ರೂ., ದ್ವಿತೀಯ 1000 ರೂ., ತೃತೀಯ 500 ರೂ. ಎಂದು ಷೋಷಸಿಲಾಗಿತ್ತು. ಪ್ರಥಮ ಸ್ಥಾನವನ್ನು (ಕಮಲಾ ಬಲಿಗಾ ಹಾವೇರಿ), ಎರಡನೇ ಸ್ಥಾನ (ಶ್ರೀ ಮೃತ್ಯುಂಜಯ ಕಬ್ಬೂರ್), ಪಡೆದುಕೊಂಡರು. ಉಳಿದಂತೆ ಭಾಗವಹಿಸಿದ 51 ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಉಪನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದವರು