ಕರ್ನಾಟಕ

karnataka

ETV Bharat / state

ಕೊರೊನಾ ಪಾಸಿಟಿವ್​ಗೆ ಹೆದರಿ ನೀರು ತುಂಬಿದ ಕ್ವಾರಿಗೆ ಹಾರಿ ಮಹಿಳೆ ಆತ್ಮಹತ್ಯೆ - hubli latest news

ಕೊರೊನಾ ಪಾಸಿಟಿವ್​ ಬಂದಿದ್ದಕ್ಕೆ ಮಹಿಳೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಬ್ಬಳ್ಳಿಯ ಅದರಗುಂಚಿ ಗ್ರಾಮದಲ್ಲಿ ಈ ಘಟನೆ ಜರುಗಿದೆ.

 corona positive Woman commits suicide in hubli
corona positive Woman commits suicide in hubli

By

Published : May 10, 2021, 9:39 PM IST

ಹುಬ್ಬಳ್ಳಿ: ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಹೆದರಿ ಮಹಿಳೆಯೊಬ್ಬರು ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ.

ಅದರಗುಂಚಿಯ ಬಸಮ್ಮ ಸಹದೇವ ಬಳ್ಳೂರ (50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇಂದು ಬೆಳಗ್ಗೆ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ವರದಿ ಬಂದಿತು ಎನ್ನಲಾಗಿದ್ದು, ಇದರಿಂದ ಹೆದರಿ ಗ್ರಾಮ ಸರಹದ್ದಿನಲ್ಲಿರುವ ಕಲ್ಲು ಕ್ವಾರಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details