ಧಾರವಾಡ: ನಗರದಲ್ಲಿ ಒಂದೇ ಶಾಲೆಯ 8 ಜನ ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದೆ. ಓರ್ವ ಶಿಕ್ಷಕಿಯಿಂದ ಏಳು ಜನ ಶಿಕ್ಷಕರಿಗೆ ಈ ಮಹಾಮಾರಿ ವಕ್ಕರಿಸಿದೆ.
ನಗರದ ಪ್ರತಿಷ್ಠಿತ ಖಾಸಗಿ ಹೈಸ್ಕೂಲ್ವೊಂದರ ಶಿಕ್ಷಕರು ಇವರಾಗಿದ್ದಾರೆ. ಶಾಲೆಯ ಆರಂಭ ಕುರಿತು ನಡೆಸಿದ ಪೂರ್ವ ಸಭೆಯಲ್ಲಿ ಸೋಂಕಿತ ಶಿಕ್ಷಕಿಯೊಬ್ಬರು ಪಾಲ್ಗೊಂಡಿದ್ದರಿಂದ ಈಗ ಉಳಿದ ಶಿಕ್ಷಕರಿಗೆ ಕಂಟಕವಾಗಿದೆ. ಶಿಕ್ಷಕಿಗೆ (ಪಿ-5970) ಜೂ. 11 ರಂದು ಜ್ವರ, ನೆಗಡಿ, ಕೆಮ್ಮಿನ ಹಿನ್ನೆಲೆ ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢವಾಗಿತ್ತು. ಈಕೆಯ ಸಂಪರ್ಕಕ್ಕೆ ಬಂದ ಪತಿ ಸಹಿತ ಏಳು ಶಿಕ್ಷಕರಿಗೂ ಈಗ ಸೋಂಕು ದೃಢಪಟ್ಟಿದೆ.