ಹುಬ್ಬಳ್ಳಿ:ನಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೋವಿಡ್ ವಾರ್ಡ್ನಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ಕಳ್ಳ ಪತ್ತೆಯಾಗಿದ್ದಾನೆ. ಗದಗ ಬೆಟಗೇರಿ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ಪೋಲೀಸರು ಮತ್ತೆ ಈತನನ್ನು ಬಂಧಿಸಿದ್ದಾರೆ.
ರೋಗಿ ಸಂಖ್ಯೆ14537 ಆಗಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಹಾರ್ಡ್‌ವೇರ್ ಅಂಗಡಿಗಳ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ. ನಿನ್ನೆ ಬಳಗ್ಗೆ 5.30ರ ಸುಮಾರಿಗೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈತ ಗದಗದ ತನ್ನ ನಿವಾಸದಲ್ಲಿ ಸೆರೆ ಸಿಕ್ಕಿದ್ದಾನೆ.