ಧಾರವಾಡ:ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಧಾರವಾಡದ ಮನೆಯಲ್ಲಿ ಮಾಜಿ ಸಚಿವ ಹೋಮ್ ಐಸೊಲೇಷನ್‌ಗೆ ಒಳಗಾಗಿದ್ದಾರೆ.
ಕುಲಕರ್ಣಿ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಬೆಂಬಲಿಗರು ಹಾರೈಸುತ್ತಿದ್ದಾರೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿನಯ್ ಕುಲಕರ್ಣಿ ಕೊರೊನಾ ಮುಕ್ತರಾಗಲೆಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೊರೊನಾ ಪಾಸಿಟಿವ್ - ಕೊರೊನಾ
ಎರಡು ದಿನಗಳ ಹಿಂದೆ ನೆಗಡಿ ಕಾಣಿಸಿಕೊಂಡಾಗ ಮಾಜಿ ಸಚಿವ ವಿನಯ್ ಕುಲಕರ್ಣಿ ತಪಾಸಣೆ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

Vinaya kulakarni
ಎರಡು ವಾರಗಳ ಹಿಂದೆ ನಟ ದರ್ಶನ ಅವರೊಂದಿಗೆ ವಿನಯ್ ಕುಲಕರ್ಣಿ ಕಾಣಿಸಿಕೊಂಡಿದ್ದರು.ಈ ವೇಳೆ ದರ್ಶನ ಭೇಟಿಗೆ ಅಪಾರ ಅಭಿಮಾನಿಗಳು ಸೇರಿದ್ದರು. ಆಗಸ್ಟ್ 14ರಂದು ಇಡೀ ದಿನ ಧಾರವಾಡದ ವಿನಯ್ ಡೈರಿಯಲ್ಲಿ ಚಿತ್ರನಟ ಕಾಲಕಳೆದಿದ್ದರು.