ಹುಬ್ಬಳ್ಳಿ :ನಗರ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ, ಧಾರವಾಡ ನಗರ ಸಾರಿಗೆ ವಿಭಾಗವು ಬಿಆರ್‌ಟಿಎಸ್ ಘಟಕದಲ್ಲಿ ಧಾರವಾಡ ಜಿಲ್ಲಾ ಆಡಳಿತದ ನಿರ್ದೇಶನದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಘಟಕದ 65 ಆಡಳಿತ, ತಾಂತ್ರಿಕ ಮತ್ತು ಚಾಲನಾ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು.