ಧಾರವಾಡ: ಜಿಲ್ಲೆಯಲ್ಲಿಂದು 71 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಇದೀಗ 1,159ಕ್ಕೆ ಏರಿಕೆಯಾಗಿದೆ.
ಧಾರವಾಡ ಜಿಲ್ಲೆಯಲ್ಲಿಂದು 71 ಜನರಿಗೆ ಕೊರೊನಾ... ಐವರು ಸಾವು - Dharwad Corona Case
ಧಾರವಾಡ ಜಿಲ್ಲೆಯಲ್ಲಿಂದು 71 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಹಾಮಾರಿಯಿಂದ ಐವರು ಸಾವನ್ನಪ್ಪಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿಂದು 71 ಜನರಿಗೆ ಕೊರೊನಾ..ಐವರು ಸಾವು
38 ಜನರಿಗೆ ಐಎಲ್ಐ ಕಾರಣ ಪರೀಕ್ಷಿಸಿದಾಗ ದೃಢಪಟ್ಟಿದ್ದು, ಸೋಂಕಿತರ ಸಂಪರ್ಕದಿಂದ 24 ಜನರಿಗೆ ಸೋಂಕು ತಗುಲಿದೆ. ಎಸ್ಎಆರ್ಐ ತೊಂದರೆಯಿಂದ 6 ಜನರಿಗೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣದಿಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನಿಬ್ಬರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದ್ದು, ಕೊರೊನಾದಿಂದ ಇಂದು ಒಂದೇ ದಿನ ಐವರ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇದೀಗ 38ಕ್ಕೇರಿದೆ.
ಇಂದು 36 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 703 ಸಕ್ರಿಯ ಪ್ರಕರಣಗಳಿವೆ. ಉಳಿದ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.