ಧಾರವಾಡ :ಜಿಲ್ಲೆಯಲ್ಲಿಂದು 158 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,485ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು 158 ಜನರಿಗೆ ಕೊರೊನಾ, ಐವರು ಸಾವು - Dharwad corona update
ಇಂದು 135 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟು 845 ಸೋಂಕಿತರು ಗುಣಮುಖರಾಗಿದ್ದಾರೆ..
ಧಾರವಾಡ ಜಿಲ್ಲೆಯಲ್ಲಿಂದು 158 ಜನರಿಗೆ ಕೊರೊನಾ..ಐವರು ಸಾವು
ಅಲ್ಲದೆ, ಇಂದು ಕೊರೊನಾಗೆ ಐವರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 78ಕ್ಕೇರಿದೆ. ನಗರ ಠಾಣೆ ಪೊಲೀಸ್ 40 ವರ್ಷದ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯಲ್ಲಿನ ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ.
ಇಂದು 135 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟು 845 ಸೋಂಕಿತರು ಗುಣಮುಖರಾಗಿದ್ದಾರೆ. 1,562 ಸಕ್ರಿಯ ಪ್ರಕರಣಗಳಿವೆ.