ಧಾರವಾಡ: ಇಲ್ಲಿನ ಪ್ರತಿಷ್ಠಿತ ಖಾಸಗಿ ಕಂಪನಿಗಳ ನೌಕರರು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಹರಿಬಿಟ್ಟು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೊರೊನಾ ಪಾಸಿಟಿವ್ ಬಂದು, ಕೋವಿಡ್ ಕೇರ್ ಸೆಂಟರ್ನಲ್ಲಿರುವ ಇವರು ತಮ್ಮ ಸಮಸ್ಯೆಗಳನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿದ್ದಾರೆ

ಕೋವಿಡ್ ಕೇರ್ ಸೆಂಟರ್ನಿಂದ ಯಾರೂ ಸಹ ನಮ್ಮನ್ನು ಭೇಟಿ ಆಗಿಲ್ಲ, ನಮ್ಮಲ್ಲಿ ಯಾವುದೇ ಕೊರೊನಾ ರೋಗದ ಲಕ್ಷಣಗಳು ಇಲ್ಲ, ನಾವು ಇರುವ ಸ್ಥಳದಲ್ಲಿ ಸ್ಯಾನಿಟೈಸ್ ಮಾಡಿಲ್ಲ ಎಂದು ಅಲ್ಲಿನ ಸಮಸ್ಯೆಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟು ಕಂಪನಿ ನೌಕರರ ಅಳಲು ತೋಡಿಕೊಂಡಿದ್ದಾರೆ.
ನಮ್ಮನು ಚೆಕಪ್ ಮಾಡಲು ಡಾಕ್ಟರ್ ಸಹ ಬರುತ್ತಿಲ್ಲ, ನಮಗೆ ಸರಿಯಾದ ರೀತಿಯಲ್ಲಿ ಕೊರೊನಾ ಚಿಕಿತ್ಸೆ ಸಿಗುತ್ತಿಲ್ಲ ಎಂದಿದ್ದಾರೆ. ಕೋವಿಡ್ ಬಂದರೆ ಜನ ಭಯಪಡುವ ಅವಶ್ಯಕತೆ ಇಲ್ಲ, ನಾವು ಆರಾಮಾಗಿ ಇದ್ದೇವೆ ಯಾರು ಭಯಪಡಬೇಡಿ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.