ಕರ್ನಾಟಕ

karnataka

ETV Bharat / state

ಕಿಮ್ಸ್ ಹೊರಗಡೆ ಕೊರೊನಾ ಸೋಂಕಿತರ ಪರದಾಟ: ವಿಡಿಯೋ ವೈರಲ್ - ಹುಬ್ಬಳ್ಳಿ

ಕೊರೊನಾ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಅಲ್ಲಲ್ಲಿ‌ ಕೇಳಿ ಬರುತ್ತಿವೆ. ಹಾಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿಯೂ ಕೊರೊನಾ ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Corona patients are not being admitted
ಕಿಮ್ಸ್ ಹೊರಗಡೆ ಕೊರೊನಾ ಸೋಂಕಿತರ ಪರದಾಟ

By

Published : Jul 7, 2020, 8:02 AM IST

ಹುಬ್ಬಳ್ಳಿ:ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕಿಮ್ಸ್ ಹೊರಗಡೆ ಕೊರೊನಾ ಸೋಂಕಿತರ ಪರದಾಟ: ವಿಡಿಯೋ ವೈರಲ್
ಹೌದು, ನಗರದ ನವೀನ ಎಂ ಎಂಬುವವರು ಕೊರೊನಾ ರೋಗಿಗಳನ್ನು ಕಿಮ್ಸ್​ನಲ್ಲಿ ಸೇರಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ತಡರಾತ್ರಿ ನಗರದ ಸ್ವಾಮಿ ವಿವೇಕಾನಂದ ಆಸ್ಪತ್ರೆಯಿಂದ ಇಬ್ಬರು ಕೊರೊನಾ ಸೋಂಕಿತರನ್ನು ಕಿಮ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್​​ಮೂಲಕ ಸ್ಥಳಾಂತರ ಮಾಡಲಾಗಿದೆ‌. ಆದರೆ, ಗಂಟೆಗಳವರೆಗೂ ಕಿಮ್ಸ್ ಆಸ್ಪತ್ರೆಯ ಹೊರಗಡೆ ರೋಗಿಗಳು ಆ್ಯಂಬುಲೆನ್ಸ್​​ ಒಳಗೆ ಇದ್ದರೂ ಸೇರಿಸಿಕೊಂಡಿಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಮೂಲಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌‌.

ABOUT THE AUTHOR

...view details