ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ಕಳೆದ 24 ಗಂಟೆಯಲ್ಲಿ ಒಬ್ಬರಲ್ಲಿ ಮಾತ್ರ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಫದ ಮಾದರಿ ರವಾನೆ ಮಾಡಲಾಗಿದೆ.
ಕೊರೊನಾ ಭೀತಿ: ಐವರ ವರದಿ ಬಾಕಿ ಆರೋಗ್ಯ ಇಲಾಖೆ - ಧಾರವಾಡ ಸುದ್ದಿ
ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಕಳೆದ 24 ಗಂಟೆಯಲ್ಲಿ ಒಬ್ಬರಲ್ಲಿ ಮಾತ್ರ ಶಂಕೆ ವ್ಯಕ್ತವಾಗಿದೆ.
ಧಾರವಾಡ ಕೊರೋನಾ ಭೀತಿ
ನಿನ್ನೆ ನಾಲ್ವರಲ್ಲಿ ಕಂಡಿದ್ದ ಶಂಕಿತ ಕೊರೊನಾ ಗುಣಲಕ್ಷ್ಮಣ ನಿನ್ನೆಯದು ಸೇರಿ ಐವರ ವರದಿ ಬಾಕಿಯಿದೆ. ಐವರಿಗೂ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 485 ಜನರ ಮೇಲೆ ನಿಗಾ ವಹಿಸಲಾಗಿದೆ..
203 ಜನರಿಗೆ 15 ದಿನಗಳ ಹೋಮ್ ಐಸೋಲೇಷನ್ 247 ಜನರಿಂದ 14 ದಿನ ಹೋಮ್ ಐಸೋಲೇಷನ್ ಪೂರ್ಣಗೊಂಡಿದೆ. 30 ಜನರಿಂದ 28 ದಿನಗಳ ಹೋಮ್ ಐಸೋಲೇಷನ್ ಪೂರ್ಣವಾಗಿದೆ ಎಂದು ವರದಿ ನೀಡಿದೆ.