ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಕೋವಿಡ್ ಜಾಗೃತಿಗೆ ಧರೆಗಿಳಿದ ‘ಕೊರೊನಾ ಕಿಲ್ಲರ್ ಗಣೇಶ’ - Ganesha to create Corona awareness news

ಈ ಬಾರಿ ಕೊರೊನಾ ಜಾಗೃತಿ ಗಣಪತಿ ಪ್ರತಿಷ್ಠಾಪಿಸಿದ್ದಾರೆ. ಕೈಯಲ್ಲಿ ಮಾಸ್ಕ್, ಸ್ಯಾನಿಟೈಜರ್ ಹಿಡಿದಿರುವ ಗಣಪನನ್ನು ಪ್ರತಿಷ್ಠಾಪಿಸಿದ್ದು, ಅಕ್ಕ-ಪಕ್ಕದಲ್ಲಿ ಕೊರೊನಾ ವಾರಿಯರ್ಸ್‌ ಆದ ಪೊಲೀಸ್ ಸಿಬ್ಬಂದಿ, ವೈದ್ಯರಿಗೆ, ಮಾಧ್ಯಮದವರಿಗೆ, ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ‌.

ಕೊರೊನಾ ಕಿಲ್ಲರ್ ಗಣೇಶ Corona killer Ganapathi in Hubbali
ಕೊರೊನಾ ಕಿಲ್ಲರ್ ಗಣೇಶ

By

Published : Aug 25, 2020, 8:35 PM IST

ಹುಬ್ಬಳ್ಳಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚುತ್ತಿದ್ದು, ಇದರ ನಡುವೆಯೂ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದೆ. ಈ ಹಿನ್ನೆಲೆ ಹುಬ್ಬಳ್ಳಿ ವಿದ್ಯಾ ನಗರದ ಶ್ರೀ ಬಾಲ ಗಜಾನನ ಯುವಕ ಮಂಡಳಿ ಯುವಕರು ಕೊರೊನಾ ಕಿಲ್ಲರ್ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ್ದಾರೆ.

ಕೊರೊನಾ ಕಿಲ್ಲರ್ ಗಣೇಶ

ಪ್ರತಿ ವರ್ಷವೂ ವಿನೂತನವಾಗಿ, ಗಣೇಶನ ಪ್ರತಿಷ್ಠಾಪನೆ ಮಾಡುತ್ತಿರುವ ವಿದ್ಯಾನಗರದ ಶ್ರೀ ಬಾಲ ಗಜಾನನ ಮಂಡಳಿ ಯುವಕರು, ಈ ಬಾರಿ ಕೊರೊನಾ ಜಾಗೃತಿ ಗಣಪತಿ ಪ್ರತಿಷ್ಠಾಪಿಸಿದ್ದಾರೆ. ಕೈಯಲ್ಲಿ ಮಾಸ್ಕ್, ಸ್ಯಾನಿಟೈಜರ್ ಹಿಡಿದಿರುವ ಗಣಪನನ್ನು ಪ್ರತಿಷ್ಠಾಪಿಸಿದ್ದು, ಅಕ್ಕ-ಪಕ್ಕದಲ್ಲಿ ಕೊರೊನಾ ವಾರಿಯರ್ಸ್‌ ಆದ ಪೊಲೀಸ್ ಸಿಬ್ಬಂದಿ, ವೈದ್ಯರಿಗೆ, ಮಾಧ್ಯಮದವರಿಗೆ, ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ‌.

ಅದೇ ರೀತಿಯಾಗಿ ಈ ಯುವಕ ಮಂಡಳಿ ಪ್ರತಿವರ್ಷ ರಕ್ತದಾನ ಶಿಬಿರ, ಮಕ್ಕಳಿಗೆ ಪುಸ್ತಕ ನೀಡುವುದು ಹೀಗೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

ABOUT THE AUTHOR

...view details