ನವಲಗುಂದ: ಕೊರೊನಾ ಹಾಟ್‌ಸ್ಪಾಟ್ ಆಗಿರುವ ಮೊರಬ ಗ್ರಾಮವನ್ನು ನಿನ್ನೆ ಸೀಲ್‌ಡೌನ್ ಮಾಡಲಾಗಿದೆ. ಗ್ರಾಮದ ಸುತ್ತಮುತ್ತಲು ಪಟ್ಟಣಗಳಿಗೆ ಹೋಗುವ ಪ್ರಮುಖ ರಸ್ತೆಗಳಿಗೆ ಪೊಲೀಸ್ ಬ್ಯಾರಿಕೇಡ್, ಮುಳ್ಳಿನ ಬೇಲಿ ಹಾಕಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.
ಕೊರೊನಾ ಹಾಟ್‌ಸ್ಪಾಟ್ ಮೊರಬ ಗ್ರಾಮ ಸೀಲ್‌ಡೌನ್.. - ನವಲಗುಂದದ ಮೊರಬ ಗ್ರಾಮ ಸೀಲ್ ಡೌನ್
ರೈತರಿಗೆ ಬಿತ್ತನೆ ಮಾಡಲು ಕೃಷಿ ಸಲಕರಣೆಗಳನ್ನು ರೈತ ಸಂರ್ಪಕ ಕೇಂದ್ರಗಳಲ್ಲಿ ಪಡೆಯುವಂತೆ ಸೂಚನೆ ನೀಡಲಾಗಿದೆ. ದಿನಸಿ ಅಂಗಡಿಗಳನ್ನು ನಿಯೋಜನೆ ಮಾಡಿದ್ದು, ತರಕಾರಿ ಕೊಂಡುಕೊಳ್ಳಲು ಜನರಿಗಾಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ..
Moraba village
ಶಿರೂರ, ಅಮ್ಮಿನಭಾವಿ, ಗುಮ್ಮಗೋಳ, ಶಿವಳ್ಳಿ ಹಾಗೂ ನವಲಗುಂದಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸದ್ಯ ಗ್ರಾಮಕ್ಕೆ ಯಾರು ಬರದಂತೆ, ಯಾರು ಕೂಡ ಗ್ರಾಮದಿಂದ ಹೊರಗಡೆ ಹೋಗದಂತೆ ಎಚ್ಚರ ವಹಿಸಲಾಗಿದೆ.
ರೈತರಿಗೆ ಬಿತ್ತನೆ ಮಾಡಲು ಕೃಷಿ ಸಲಕರಣೆಗಳನ್ನು ರೈತ ಸಂರ್ಪಕ ಕೇಂದ್ರಗಳಲ್ಲಿ ಪಡೆಯುವಂತೆ ಸೂಚನೆ ನೀಡಲಾಗಿದೆ. ದಿನಸಿ ಅಂಗಡಿಗಳನ್ನು ನಿಯೋಜನೆ ಮಾಡಿದ್ದು, ತರಕಾರಿ ಕೊಂಡುಕೊಳ್ಳಲು ಜನರಿಗಾಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.