ಕರ್ನಾಟಕ

karnataka

ETV Bharat / state

ಸಾಮಾನ್ಯ ನೆಗಡಿ, ಜ್ವರ, ಕೆಮ್ಮು ಬಂದ್ರೂ ಕೊರೊನಾ ಅಂತಾರ್‌ರೀ.. - Corona fear in the villages of Hubli

ಮೆಡಿಕಲ್ ಶಾಪ್​ಗಳಲ್ಲಿ ಮಾತ್ರೆಗಳು ಸಿಗುತ್ತಿಲ್ಲ. ಚಿಕ್ಕ ಮಕ್ಕಳಿಗೆ ಜ್ವರ ಬಂದ್ರೂ ಎಲ್ಲದಕ್ಕೂ ಕೊರೊನಾ ಹಣೆಪಟ್ಟಿ ಕಟ್ಟಿ ಬಿಡುತ್ತಾರೆ ಎಂಬ ಭಯದಿಂದ ಯಾರಿಗೂ ಹೇಳದ ಪರಿಸ್ಥಿತಿ ಹಳ್ಳಿಯ ಜನರದ್ದಾಗಿದೆ..

dsddd
ಹುಬ್ಬಳ್ಳಿಯ ಗ್ರಾಮಗಳಲ್ಲಿ ಕೊರೊನಾತಂಕ

By

Published : Jul 17, 2020, 4:34 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಕೊರೊನಾ ವ್ಯಾಪಿಸುತ್ತಿದೆ. ಅನ್ಯ ರಾಜ್ಯ, ಜಿಲ್ಲೆಗಳಿಗೆ ಕೆಲಸಕ್ಕೆ ಹೋದವರು ಮತ್ತೆ ತವರಿಗೆ ಮರಳಿದ ಪರಿಣಾಮ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿವೆ.

ಹಳ್ಳಿಗಳಲ್ಲಿ ಕೊರೊನಾ ಆತಂಕ

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿ, ಕೆಮ್ಮು, ಜ್ವರಕ್ಕೂ ಕೊರೊನಾ ಎಂದು ಹೇಳಿ ಜನ ಹಾದಿ ತಪ್ಪಿಸುವ ಕೆಲಸವಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಸರಿಯಾದ ಮಾರ್ಗದರ್ಶನ ನೀಡಬೇಕು. ಸಣ್ಣಪುಟ್ಟ ಕಾಯಿಲೆಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಹಳ್ಳಿ ಜನ ಮನವಿ ಮಾಡಿದ್ದಾರೆ.

ಮೆಡಿಕಲ್ ಶಾಪ್​ಗಳಲ್ಲಿ ಮಾತ್ರೆಗಳು ಸಿಗುತ್ತಿಲ್ಲ. ಚಿಕ್ಕ ಮಕ್ಕಳಿಗೆ ಜ್ವರ ಬಂದ್ರೂ ಎಲ್ಲದಕ್ಕೂ ಕೊರೊನಾ ಹಣೆಪಟ್ಟಿ ಕಟ್ಟಿ ಬಿಡುತ್ತಾರೆ ಎಂಬ ಭಯದಿಂದ ಯಾರಿಗೂ ಹೇಳದ ಪರಿಸ್ಥಿತಿ ಹಳ್ಳಿಯ ಜನರದ್ದಾಗಿದೆ. ಕೂಡಲೇ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ಜನರ ಆರೋಗ್ಯ ಕಾಪಾಡಬೇಕಾಗಿದೆ.

ABOUT THE AUTHOR

...view details