ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್: ದಾನಿಗಳ ಕೊರತೆಯಿಂದ "ಅ‌ನಾಥ"ವಾದ ಆಶ್ರಮಗಳು - hubli Orphanage

ದಾನಿಗಳ ಕೊರತೆಯಿಂದ ಬಂಧು, ಬಳಗವಿಲ್ಲದವರಿಗಾಗಿ ಕೆಲಸ ಮಾಡುವ ಅನಾಥಾಶ್ರಮಗಳು, ನಿರ್ಗತಿಕರ ಕುಟೀರಗಳು ಈಗ ಸಮಸ್ಯೆ ಎದುರಿಸುತ್ತಿವೆ.

"ಅ‌ನಾಥ"ವಾದ ಆಶ್ರಮಗಳು
"ಅ‌ನಾಥ"ವಾದ ಆಶ್ರಮಗಳು

By

Published : Oct 1, 2020, 12:36 PM IST

ಹುಬ್ಬಳ್ಳಿ: ಅನಾಥರು ಹಾಗೂ ನಿರ್ಗತಿಕರ ಸೇವೆ ಮಾಡುವ ಅನೇಕ ಸಂಘ ಸಂಸ್ಥೆಗಳಿಗೂ ಕೊರೊನಾ ಕರಿನೆರಳು ಬಿದ್ದಿದೆ. ಬಂಧು, ಬಳಗವಿಲ್ಲದವರಿಗಾಗಿ ಕೆಲಸ ಮಾಡುವ ಅನಾಥಾಶ್ರಮಗಳು, ನಿರ್ಗತಿಕರ ಕುಟೀರಗಳಿಗೆ ದಾನಿಗಳ ಕೊರತೆ ಎದುರಾಗಿದೆ.

ಕೋವಿಡ್ ಪೂರ್ವದಲ್ಲಿ ನಗರದ ಹತ್ತಕ್ಕೂ ಹೆಚ್ಚು ಅನಾಥಾಶ್ರಮಗಳು, ನಿರ್ಗತಿಕ ಮಕ್ಕಳ ಆಶ್ರಮಗಳಿಗೆ ದಾನಿಗಳು ದೇಣಿಗೆ ರೂಪದಲ್ಲಿ ಧನಸಹಾಯ, ಆಹಾರ ಸಾಮಗ್ರಿ, ಬಟ್ಟೆ, ಹಣ್ಣುಹಂಪಲು ತರಕಾರಿಗಳನ್ನು ನೀಡುತ್ತಿದ್ದರು.‌ ಇದರಿಂದ ಆಶ್ರಮಗಳನ್ನು ಯಾವುದೇ ಅಡೆತಡೆಯಿಲ್ಲದೆ ನಿರ್ವಹಣೆ ಮಾಡಲಾಗುತ್ತಿತ್ತು. ಆದ್ರೆ ಮಾರ್ಚ್ 23ರ ನಂತರ ಕೊರೊನಾ ಭಯದಿಂದ ಅನಾಥಾಶ್ರಮಗಳ ಕಡೆ ದಾನಿಗಳು ಸುಳಿಯುತ್ತಿಲ್ಲ. ಇದರಿಂದ‌ ಆಶ್ರಮಗಳನ್ನು ‌ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ರೋಟರಿ ಸಂಸ್ಥೆಯವರು ಬಿಟ್ಟರೆ ಬೇರೆ ಯಾವ ದಾನಿಗಳು ಬಂದಿಲ್ಲ ಎನ್ನುತ್ತಾರೆ‌ ನೇಕಾರ ನಗರದ ನಿರ್ಗತಿಕ ಮಕ್ಕಳ‌ ಕುಟೀರದ ಸಂಸ್ಥಾಪಕರು.

ಸರ್ಕಾರದ ಮಾನ್ಯತೆ ಪಡೆದ ಈ ನಿರ್ಗತಿಕ ಕುಟೀರದಲ್ಲಿ 100 ನಿರ್ಗತಿಕ ಮಕ್ಕಳು ಇದ್ದಾರೆ. ಆದ್ರೆ ಈಗ ಒಂದೊಂದೇ ಶಾಲೆ ಆರಂಭವಾಗುತ್ತಿರವುದರಿಂದ ಅವರ ಬಂಧುಗಳ‌ ಮನೆಗೆ ಹೋಗಿದ್ದ ಮಕ್ಕಳು ಬರುತ್ತಿದ್ದಾರೆ. ಈ ಮಕ್ಕಳ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ತಂದೆ- ತಾಯಿ ಇಲ್ಲದ ಮಕ್ಕಳನ್ನು ಬೀದಿಗೆ ಬಿಡದೆ ಕಾಳಜಿ ವಹಿಸಿ ನೋಡಿಕೊಳ್ಳಲಾಗುತ್ತಿದೆ.

ಕೊರೊನಾ ಪೂರ್ವದಲ್ಲಿ ಈ‌ ಕುಟೀರದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾರ್ವಜನಿಕರು ಆಯೋಜನೆ ಮಾಡುತ್ತಿದ್ದರು. ತಮ್ಮ ಮಕ್ಕಳ ಹುಟ್ಟುಹಬ್ಬ ಸಭೆ ಸಮಾರಂಭ ಆಯೋಜನೆ ಮಾಡುವದರಿಂದ ಅಲ್ಪಸಹಾಯ ಮಾಡುತ್ತಿದ್ದರು. ಮಕ್ಕಳು ಅವರ ಜೊತೆ ಬೆರೆಯುತ್ತಿದ್ದರು. ಇದರಿಂದ ಮಕ್ಕಳಲ್ಲಿ ಅನಾಥ ಪ್ರಜ್ಞೆಯು ದೂರವಾಗುತ್ತಿತ್ತು. ಮಕ್ಕಳು ಚುರುಕಾಗಿರುತ್ತಿದ್ದರು. ಆದ್ರೆ ಈಗ ಕಾರ್ಯಕ್ರಮಗಳು ನಡೆಯುತ್ತಿಲ್ಲ.‌ ಇದರಿಂದ ಮಕ್ಕಳ ಊಟ, ಬಟ್ಟೆ, ವಸತಿ ಸೇರಿದಂತೆ ಪ್ರತಿಯೊಂದು ಖರ್ಚನ್ನು ಸಂಘ ಸಂಸ್ಥೆಗಳೇ ಭರಿಸಬೇಕಿದೆ.

ಸರ್ಕಾರ ‌ಕೆಲವು ಅನುದಾನಿತ ಅನಾಥಾಶ್ರಮ ಹಾಗು ನಿರ್ಗತಿಕ ಕುಟೀರಗಳಿಗೆ ಮಾರ್ಚ್ ತಿಂಗಳಲ್ಲಿ ಕೊಂಚ ಅನುದಾನವನ್ನು ‌ನೀಡುತ್ತದೆ. ಆದ್ರೆ ಸರ್ಕಾರದ ಅನುದಾನಕ್ಕೆ ಕಾಯುತ್ತ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಸಂಘ‌ ಸಂಸ್ಥೆಗಳಿಗೆ ಇದೆ.‌

ABOUT THE AUTHOR

...view details