ಕರ್ನಾಟಕ

karnataka

ETV Bharat / state

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಕ್ಷತ್ರೀಯ ಸಮಾಜದ ನೆರವಿಗೆ ಮನವಿ.. - latest news at hubli

ಇದೀಗ ಸಮಾಜ ಕೊರೊನಾದಿಂದಾಗಿ ನಲುಗಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಮಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಆರಂಭವಾಗಲಿದೆ. ಈ ದಿಸೆಯಲ್ಲಿ ಸರ್ಕಾರ ಕಲಾಕೃತಿ ನೆಚ್ಚಿಕೊಂಡ ಜನರ ಜೊತೆಗೆ ಸಭೆ ನಡೆಸಬೇಕು.

corona-effect
ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಕ್ಷತ್ರೀಯ ಸಮಾ

By

Published : Jun 19, 2020, 9:58 PM IST

ಹುಬ್ಬಳ್ಳಿ :ಗುಡಿ ಕೈಗಾರಿಕೆ, ಮಣ್ಣಿನ ಮೂರ್ತಿ ಇತ್ಯಾದಿ ಕುಲ ಕಸಬುಗಳನ್ನು ಮಾಡಿಕೊಂಡು ಬಂದಿರುವ ಸೋಮವಂಶ ಕ್ಷತ್ರೀಯ, ಚಿತ್ರಗಾರ ಸಮಾಜಕ್ಕೆ ಕೊರೊನಾ ಹೊಡೆತ ಕೊಟ್ಟಿದೆ. ಹಾಗಾಗಿ ಪರಿಹಾರ ಒದಗಿಸಬೇಕೆಂದು ಕ್ಷತ್ರೀಯ ಸಮಾಜದ ಮುಖಂಡ ಹನುಮಂತಪ್ಪ ಸಾ ನಿರಂಜನ ಒತ್ತಾಯಿಸಿದರು

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗಣೇಶ ಹಬ್ಬ ಆರಂಭವಾಗಲಿದೆ. ಸರ್ಕಾರ ಗಣಪತಿ ಉತ್ಸವ ಆಚರಣೆಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಸಂಕಷ್ಟದಲ್ಲಿರುವ ಸಮಾಜಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಚಿತ್ರಕಲೆ, ಗುಡಿ ಕೈಗಾರಿಕೆ, ಮಣ್ಣಿನ ಮೂರ್ತಿ ತಯಾರಿಸುವ ಕಲೆ ಹೊಂದಿರುವ ಸೋಮವಂಶ ಆರ್ಯ ಕ್ಷತ್ರೀಯ ಜನಾಂಗ ದೇಶದಲ್ಲಿ ಹಿಂದುಳಿದ ವರ್ಗವಾಗಿದೆ. ಸಮಾಜದವರು ಎಲ್ಲಾ ಜಿಲ್ಲೆಗಳಲ್ಲಿದ್ದಾರೆ. ಇವರುಗಳ ಮಣ್ಣಿನ ಮೂರ್ತಿಗಳನ್ನು ಅದರಲ್ಲೂ ಗಣೇಶನ ಮೂರ್ತಿಗಳನ್ನು ತಯಾರಿಸುವ ಕಲೆ ಹೊಂದಿದ್ದಾರೆ.

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಕ್ಷತ್ರೀಯ ಸಮಾಜ

ಇದೀಗ ಸಮಾಜ ಕೊರೊನಾದಿಂದಾಗಿ ನಲುಗಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಮಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಆರಂಭವಾಗಲಿದೆ. ಈ ದಿಸೆಯಲ್ಲಿ ಸರ್ಕಾರ ಕಲಾಕೃತಿ ನೆಚ್ಚಿಕೊಂಡ ಜನರ ಜೊತೆಗೆ ಸಭೆ ನಡೆಸಬೇಕು. ಅಲ್ಲದೆ ಗಣೇಶ ಉತ್ಸವ ಆಚರಣೆ ಬಗ್ಗೆ ಮಾರ್ಗದರ್ಶನ ನೀಡಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಪರಿಹಾರ ಒದಗಿಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details