ಹುಬ್ಬಳ್ಳಿ:ಜೀವನದ ಬಂಡಿಯನ್ನು ಸಾಗಿಸಲು ರಾಟೆಯನ್ನೇ ನಂಬಿದ ಬಸವರಾಜ ಎಂಬ ವೃದ್ಧ, ಕಳೆದ 5 ವರ್ಷಗಳಿಂದ ಹುಬ್ಬಳ್ಳಿಯ ಕಾಳಿದಾಸ ನಗರದಲ್ಲಿ ಮನೆಯನ್ನು ಬಾಡಿಗೆ ಪಡೆದಿದ್ದಾನೆ. ಅಲ್ಲಿಯೇ ಟೈಲರಿಂಗ್ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ವೃದ್ಧನ ರಾಟೆಯ ಚಕ್ರಕ್ಕೆ ಮಹಾಮಾರಿ ಕೊರೊನಾ ಅಡ್ಡಿಯಾಗಿದೆ.
ನನಗೆ ಈಗ ಮಾಡಲು ಕೆಲಸವಿಲ್ಲದೇ ಹಣದ ಕೊರತೆ ಎದುರಾಗಿ ಹೊಟ್ಟೆಯನ್ನೇ ತುಂಬಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇದ್ದೇನೆ. ಇಂತಹ ಸ್ಥಿತಿಯಲ್ಲಿ ಮನೆ ಬಾಡಿಗೆ ಕಟ್ಟಿ ಎಂದು ಮಾಲೀಕ ದುಂಬಾಲು ಬಿದ್ದಿದ್ದಾರೆ. ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ಮನೆಗೆ ಸರಬರಾಜು ಆಗುವ ನೀರು ಹಾಗೂ ಕರೆಂಟ್ ಸಂಪರ್ಕ ಕಟ್ ಮಾಡುವುದರ ಮೂಲಕ ಮಾನವೀಯತೆ ಮರೆತಿದ್ದಾರೆ ಎಂದು ಆರೋಪಿಸಿ ವೃದ್ಧ ಬಸವರಾಜ್ ಅಲವತ್ತಕೊಂಡರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರು ಸಹಾಯ ಮಾಡಿಲ್ಲ. ನಮಗೆ ರಕ್ತ ಸಂಬಂಧಿಗಳು ಇದ್ದರೂ ಪ್ರಯೋಜನವಿಲ್ಲ. ಈ ಸಂದಿಗ್ಧ ಸ್ಥಿತಿಯಲ್ಲಿ ಮನೆಯನ್ನು ಖಾಲಿ ಮಾಡು ಎಂದು ಮನೆ ಮಾಲೀಕರು ಒತ್ತಡ ಹಾಕುತ್ತಿದ್ದಾರೆ. ಈಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೆಂದು ಕಣ್ಣೀರು ಹಾಕುತ್ತಿದ್ದಾರೆ ಕುಟುಂಬಸ್ಥರು.
ಕೊರೊನಾದಿಂದ ವೃದ್ಧ ದಂಪತಿಯ ಜೀವನ ಸಂಕಷ್ಟ ಸಿಲುಕಿದ್ದು, ತಮ್ಮ ಕಷ್ಟಕ್ಕೆ ಸಹಾಯ ಮಾಡುವಂತೆ ಸಹೃದಯಿಗಳಿಗೆ ಮನವಿ ಮಾಡಿದ್ದಾರೆ.
ನೆರವಾಗಲು ಇಚ್ಛಿಸುವವರು ಈ ಬ್ಯಾಂಕ್ ಖಾತೆಗೆ ಹಣ ಹಾಕಬಹುದು: