ಧಾರವಾಡ: ತಾಲೂಕಿನ ವೆಂಕಟಾಪುರದ ಸಿದ್ದರ ಕಾಲೋನಿಯಲ್ಲಿ 1500 ಅಲೆಮಾರಿಗಳು ವಾಸವಾಗಿದ್ದಾರೆ. ಕಳೆದ 8 ದಿನಗಳಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲೆಮಾರಿಗಳು ದುಡಿಮೆ ಇಲ್ಲದೇ ಕಂಗಾಲಾಗಿದ್ದಾರೆ.
ಸಹಾಯಾಚಿಸಿ ವಿಡಿಯೋ ಹರಿಯಬಿಟ್ಟ ಅಲೆಮಾರಿಗಳು.. - ವೆಂಕಟಾಪುರದ ಸಿದ್ದರ ಕಾಲೋನಿ
ತರಕಾರಿ ತರಲು ಕೈಯಲ್ಲಿ ಹಣವಿಲ್ಲ. ಮನೆಯಲ್ಲಿ ಅಕ್ಕಿಯೂ ಖಾಲಿಯಾಗಿದೆ. ದಯಮಾಡಿ ದಾನಿಗಳು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಅಲೆಮಾರಿಗಳು
ವಾರದ ಸಂತೆ, ಜಾತ್ರೆಗಳನ್ನೇ ಅಲೆಮಾರಿಗಳು ಆಶ್ರಯಿಸಿಕೊಂಡಿದ್ದರು. ಜಾತ್ರೆ, ಸಂತೆಗಳಲ್ಲಿ ಕಲೆ ಪ್ರದರ್ಶಿಸಿ ಬಿಡಿಗಾಸು ಪಡೆಯುತ್ತಿದ್ದರು. 8 ದಿನಗಳಿಂದ ಯಾವುದೇ ಚಿಂತೆ ಇಲ್ಲದೇ ಇದ್ವಿ ಈಗ ಮನೆಯಲ್ಲಿನ ದಿನಸಿ ಖಾಲಿ ಆಗಿವೆ. ತರಕಾರಿ ತರಲು ಕೈಯಲ್ಲಿ ಹಣವಿಲ್ಲ. ಮನೆಯಲ್ಲಿ ಅಕ್ಕಿಯೂ ಖಾಲಿಯಾಗಿದೆ. ದಯಮಾಡಿ ದಾನಿಗಳು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ದಾನಿಗಳಿಂದ ಸಹಾಯಾಚಿಸಿ ಅಲೆಮಾರಿಗಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.