ಹುಬ್ಬಳ್ಳಿ:ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವ ಉದ್ದೇಶದಿಂದ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಏಪ್ರಿಲ್ 1 ರವರೆಗೆ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಕೊರೊನಾ ಎಫೆಕ್ಟ್: ಸಾರ್ವಜನಿಕರು, ಕಕ್ಷಿದಾರರಿಗೆ ಪ್ರವೇಶ ನಿರ್ಬಂಧ ಹೇರಿದ ಹುಬ್ಬಳ್ಳಿ ಕೋರ್ಟ್ - ಹುಬ್ಬಳ್ಳಿ ನ್ಯಾಯಾಲಯ
ಅತ್ಯಾವಶ್ಯಕ ಪ್ರಕರಣ ವಿಚಾರಣೆ ನಡೆಯುವಾಗ ಮಾತ್ರ ವಕೀಲರು ನ್ಯಾಯಾಲಯಕ್ಕೆ ಆಗಮಿಸಬಹುದಾಗಿದೆ. ಉಳಿದಂತೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನ್ಯಾಯಾಲಯದಲ್ಲಿ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
![ಕೊರೊನಾ ಎಫೆಕ್ಟ್: ಸಾರ್ವಜನಿಕರು, ಕಕ್ಷಿದಾರರಿಗೆ ಪ್ರವೇಶ ನಿರ್ಬಂಧ ಹೇರಿದ ಹುಬ್ಬಳ್ಳಿ ಕೋರ್ಟ್ Hubli Court](https://etvbharatimages.akamaized.net/etvbharat/prod-images/768-512-6454671-thumbnail-3x2-klb.jpg)
ಹುಬ್ಬಳ್ಳಿ ನ್ಯಾಯಾಲಯ
ಸಾರ್ವಜನಿಕರು ಹಾಗೂ ಕಕ್ಷಿದಾರರಿಗೆ ನಿರ್ಬಂಧ ಹೇರಿದ ಹುಬ್ಬಳ್ಳಿ ನ್ಯಾಯಾಲಯ
ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದ್ದು, ಹುಬ್ಬಳ್ಳಿ ನ್ಯಾಯಾಲಯದಲ್ಲಿ ಕೂಡ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ತಮ್ಮ ಪ್ರಕರಣದ ವಿಚಾರಣೆ ಹಾಗೂ ದಿನಾಂಕಗಳನ್ನು ವಕೀಲರ ಮೂರನೇ ಅಥವಾ ಸಿಐಎಸ್ ಆ್ಯಪ್ ಮೂಲಕ ನ್ಯಾಯಾಲಯ ಸೂಚನೆ ನೀಡಿದೆ.
ಅತ್ಯವಶ್ಯಕ ಪ್ರಕರಣ ವಿಚಾರಣೆ ನಡೆಯುವಾಗ ಮಾತ್ರ ವಕೀಲರು ನ್ಯಾಯಾಲಯಕ್ಕೆ ಆಗಮಿಸಬಹುದಾಗಿದೆ. ಉಳಿದಂತೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿರ್ಬಂಧ ಹಾಕಲಾಗಿದೆ. ಕೊರೊನಾ ಬಗ್ಗೆ ಸಾರ್ವಜನಿಕರು ಹಾಗೂ ಕಕ್ಷಿದಾರರು ಭಯ ಪಡುವ ಅಗತ್ಯವಿಲ್ಲಎಂದು ವಕೀಲರು ಸಂಘದ ಅಧ್ಯಕ್ಷರು ಹೇಳಿದ್ದಾರೆ.