ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್​.. ಲಕ್ಷ್ಮಿ ದೇವಸ್ಥಾನಗಳಲ್ಲಿ ಬೆರಳೆಣಿಕೆಯಷ್ಟು ಭಕ್ತರು.. - Corona Effect

ಪ್ರತಿ‌ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದವರು ಕೊರೊನಾ ಭೀತಿಯಿಂದಾಗಿ ಈ ಬಾರಿ ಸರಳವಾಗಿ ಆಚರಿಸಿ ತೃಪ್ತಿ ಪಟ್ಟಿದ್ದಾರೆ. ಇನ್ನೂ ನಗರದ ಜನತಾ ಬಜಾರ್ ನ ಹಾಗೂ ದೇಶಪಾಂಡೆ ನಗರದ ಸುಪ್ರಸಿದ್ಧ ಲಕ್ಷ್ಮಿ ದೇವಸ್ಥಾನಗಳು ಭಕ್ತರಿಲ್ಲದೆ ಖಾಲಿ ಹೊಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು..

Corona Effect: Devotees less caame temple on Varamahalakshmi festival
ಕೊರೊನಾ ಎಫೆಕ್ಟ್​: ಲಕ್ಷ್ಮೀ ದೇವಸ್ಥಾನಗಳಲ್ಲಿ ಬೆರಳೆಣಿಕೆಯಷ್ಟು ಭಕ್ತರು..!

By

Published : Jul 31, 2020, 4:49 PM IST

ಹುಬ್ಬಳ್ಳಿ :ಕೊರೊನಾ ಹಿನ್ನೆಲೆ ಭಕ್ತಾದಿಗಳ್ಯಾರೂ ದೇವಸ್ಥಾನಗಳಿಗೆ ಹೋಗದೆ ಮನೆಯಲ್ಲೇ ಸರಳ ಆಚರಣೆ ಮಾಡಲಾಗಿದೆ. ಈ ಬಾರಿಯ ವರಮಹಾಲಕ್ಷ್ಮಿ ಹಬ್ಬ ಕಳೆಗುಂದಿದೆ‌ ಎಂದೇ ಹೇಳ ಬಹುದಾಗಿದೆ.

ಲಕ್ಷ್ಮಿ ದೇವಸ್ಥಾನಗಳಲ್ಲಿ ಬೆರಳೆಣಿಕೆಯಷ್ಟು ಭಕ್ತರು..

ಪ್ರತಿ‌ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದವರು ಕೊರೊನಾ ಭೀತಿಯಿಂದಾಗಿ ಈ ಬಾರಿ ಸರಳವಾಗಿ ಆಚರಿಸಿ ತೃಪ್ತಿ ಪಟ್ಟಿದ್ದಾರೆ. ನಗರದ ಜನತಾ ಬಜಾರ್‌ ಹಾಗೂ ದೇಶಪಾಂಡೆ ನಗರದ ಸುಪ್ರಸಿದ್ಧ ಲಕ್ಷ್ಮಿ ದೇವಸ್ಥಾನಗಳು ಭಕ್ತರಿಲ್ಲದೆ ಖಾಲಿ ಹೊಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೇವಾಲಯಗಳಿಗೆ ಕೇವಲ ಬೆರಳೆಣಿಕೆಯಷ್ಟು ಭಕ್ತಾದಿಗಳು ಮಾತ್ರ ಆಗಮಿಸುತ್ತಿದ್ದ ದೃಶ್ಯ ಕಂಡು ಬಂತು. ಆದರೂ, ದೇವಸ್ಥಾನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತನ ಮೇಲೂ ನಿಗಾ ಇಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿಯೇ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.

ABOUT THE AUTHOR

...view details