ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ಗೆ ಕೋವಿಡ್ ದೃಢಪಟ್ಟಿದೆ.
ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್‌ಗೆ ಸೋಂಕು - Hubli dharwad covid cases
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ಗೆ ಕೋವಿಡ್ ದೃಢಪಟ್ಟಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Hubli
ಕಳೆದ ಅವಧಿಯಲ್ಲಿ ಬಿಜೆಪಿ ಪಕ್ಷದಿಂದ ಪಾಲಿಕೆಯಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದ ಇವರು ಹುಬ್ಬಳ್ಳಿಯ ಸಿಬಿಟಿ ನಿವಾಸಿಯಾಗಿದ್ದು, 52 ವರ್ಷ ವಯಸ್ಸಾಗಿದೆ.
ಎರಡು ದಿನದ ಹಿಂದಷ್ಟೇ (ಬಿಜೆಪಿ) ಪಾಲಿಕೆಯ ಮಾಜಿ ಸದಸ್ಯರೊಬ್ಬರಿಗೆ ಕೊರೊನಾ ಖಾತರಿಯಾಗಿತ್ತು. ಇಬ್ಬರಿಗೂ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರೂ ಕೆಲವು ಗಣ್ಯರ ಜೊತೆ ಸಂಪರ್ಕ ಹೊಂದಿದ್ದಲ್ಲದೇ ಹಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದು, ಎಲ್ಲರಲ್ಲೂ ಆತಂಕ ಶುರುವಾಗಿದೆ.