ಹುಬ್ಬಳ್ಳಿ/ಧಾರವಾಡ:ಕೊರೊನಾ ಹೊಡೆತಕ್ಕೆ ಧಾರವಾಡ ನಲುಗಿ ಹೋಗಿದೆ. ನಿತ್ಯ ನೂರಾರು ಹೊಸ ಪ್ರಕರಣಗಳಿಲ್ಲಿ ದಾಖಲಾಗುತ್ತಿವೆ.
ಡೇಂಜರ್ ಝೋನ್‌ನಲ್ಲಿದೆ ಧಾರವಾಡ:
ಹುಬ್ಬಳ್ಳಿ/ಧಾರವಾಡ:ಕೊರೊನಾ ಹೊಡೆತಕ್ಕೆ ಧಾರವಾಡ ನಲುಗಿ ಹೋಗಿದೆ. ನಿತ್ಯ ನೂರಾರು ಹೊಸ ಪ್ರಕರಣಗಳಿಲ್ಲಿ ದಾಖಲಾಗುತ್ತಿವೆ.
ಡೇಂಜರ್ ಝೋನ್‌ನಲ್ಲಿದೆ ಧಾರವಾಡ:
ಜಿಲ್ಲೆ ಕೊರೊನಾ ಅಪಾಯ ವಲಯದಲ್ಲಿದೆಯೇ ಎನ್ನುವ ಅನುಮಾನ ಶುರುವಾಗಿದೆ. ನಿತ್ಯವೂ ಸಾವಿನ ಸಂಖ್ಯೆ ಮತ್ತು ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರೂ ಮಾಹಿತಿ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 3.12 ಲಕ್ಷಕ್ಕೂ ಹೆಚ್ಚು ಜನರಿಗೆ ಕೆಮ್ಮು, ನೆಗಡಿ, ಜ್ವರ ಸಂಬಂಧಿತ ಕಾಯಿಲೆಗಳು ದೃಢವಾಗಿದೆ. ಒಟ್ಟು 1,800 ಗರ್ಭಿಣಿಯರು ಈಗಾಗಲೇ ಕೋವಿಡ್ ಟೆಸ್ಟ್ ಮಾಡಿಸಿದ್ದು, 26 ಸಾವಿರ ಗರ್ಭಿಣಿಯರಿದ್ದಾರೆ. ಇದಲ್ಲದೆ 1 ಲಕ್ಷ ಹಿರಿಯ ನಾಗರಿಕರಿದ್ದು ಅದೇ ಸಂಖ್ಯೆಯ ಅಧಿಕ ಜನ ಸಣ್ಣಪುಟ್ಟ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಸೀನಿಯರ್ ಸಿಟಿಜನ್ಸ್ ಮೇಲೆ ಹೆಚ್ಚು ಗಮನ ಹರಿಸಬೇಕಿದೆ ಜಿಲ್ಲಾಡಳಿತ:
60 ವರ್ಷ ಮೇಲ್ಪಟ್ಟ ವಯಸ್ಕರೇ ಕೋವಿಡ್ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿದ್ದು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಬಿಪಿ, ಶುಗರ್, ಶೀತ, ಕಫ, ರಕ್ತದೊತ್ತಡ ಈ ರೀತಿಯ ಹಲವು ಖಾಯಿಲೆಗಳಿಗೆ ಇವರನ್ನು ಬಾಧಿಸುತ್ತಿದೆ.