ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್ - ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು

ಹುಬ್ಬಳ್ಳಿಯಲ್ಲಿ ಮತ್ತೆರಡು ಕೊರೊನಾ ಸೋಂಕಿತ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9 ಕ್ಕೆ ಏರಿದಂತಾಗಿದೆ.

corona cases in hubli
ಹುಬ್ಬಳ್ಳಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್

By

Published : Apr 23, 2020, 9:50 AM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, P - 236 ಸಂರ್ಪಕದಿಂದ ಸೋಂಕು ಹರಡಿದೆ. 29 ವರ್ಷದ ಯುವತಿ ಹಾಗೂ13 ವರ್ಷದ ಬಾಲಕಿಗೆ ಕೊರೊನಾ ಧೃಡಪಟ್ಟಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9 ಕ್ಕೆ ಏರಿದೆ.

ಹುಬ್ಬಳ್ಳಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಪಾಸಿಟಿವ್

ಇಬ್ಬರ ವರದಿ ಪಾಸಿಟಿವ್ ಬಂದ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಜಿಲ್ಲಾಡಳಿತ ಪತ್ರ ಬರೆದು, ಇಬ್ಬರ ಮೊಬೈಲ್‌ ಸಿಡಿಆರ್ ನೀಡುವಂತೆ ಕೋರಲಾಗಿದೆ. ಮಾರ್ಚ್ 20 ರಿಂದ ಇಬ್ಬರು ಸೋಂಕಿತರ ಕಾಲ್ ಡೇಟಾ ರೆಕಾರ್ಡಿಂಗ್​ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಇಬ್ಬರ ಜೊತೆ ಪ್ರಾಥಮಿಕ ಸಂರ್ಪಕದಲ್ಲಿರುವವರ ಪತ್ತೆ ಹಚ್ಚಲು ಜಿಲ್ಲಾಡಳಿತ ಮುಂದಾಗಿದೆ. ಇಲ್ಲಿಯವರೆಗೂ ಹುಬ್ಬಳ್ಳಿಯಲ್ಲಿ ಒಬ್ಬನಿಂದಲೇ 8 ಜನರಿಗೆ ಸೋಂಕು ತಗುಲಿದಂತಾಗಿದೆ. ಇದಕ್ಕೆಲ್ಲ P 194 ಮೂಲ ಕಾರಣನಾಗಿದ್ದಾನೆ.

ABOUT THE AUTHOR

...view details