ಕರ್ನಾಟಕ

karnataka

ETV Bharat / state

ನೂತನ ದಂಪತಿಗೆ ಕೊರೊನಾ ಜಾಗೃತಿ ಮೂಡಿಸಿದ ಕಲಾವಿದ - Covid awareness to new couple

ನಗರದ ಸಪ್ತಾಪೂರದ ಸತ್ಯಸಾಯಿ ಸಮುದಾಯ‌ ಭವನದಲ್ಲಿ ಕಾಶಿನಾಥ ಹಾಗೂ ನಿರ್ಮಾಲಾ ದಂಪತಿ ಮದುವೆ ಕಾರ್ಯಕ್ರಮ‌ ನಡೆದಿತ್ತು. ಕಲಾವಿದ ಮಂಜುನಾಥ ಹಿರೇಮಠ ಭವನಕ್ಕೆ ತೆರಳಿ ಕೊರೊನಾ ಬಗ್ಗೆ ತಿಳಿವಳಿಕೆ ಮೂಡಿಸಿದ್ದಾರೆ.

Corona
Corona

By

Published : Apr 26, 2021, 5:42 PM IST

Updated : Apr 26, 2021, 6:20 PM IST

ಧಾರವಾಡ: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಜಾಗೃತಿ ಮೂಡಿಸುತ್ತಿರುವ ಪರಿಸರ ಸ್ನೇಹಿ ಕಲಾವಿದ ಮಂಜನಾಥ ಹಿರೇಮಠ ಇಂದು ನೂತನ ದಂಪತಿಗೂ ಜಾಗೃತಿ ಮೂಡಿಸಿದರು.

ನಗರದ ಸಪ್ತಾಪೂರದ ಸತ್ಯಸಾಯಿ ಸಮುದಾಯ‌ ಭವನದಲ್ಲಿ ಕಾಶಿನಾಥ ಹಾಗೂ ನಿರ್ಮಾಲಾ ದಂಪತಿ ಮದುವೆ ಕಾರ್ಯಕ್ರಮ‌ ನಡೆದಿತ್ತು. ಕಲಾವಿದ ಮಂಜುನಾಥ ಹಿರೇಮಠ ಭವನಕ್ಕೆ ತೆರಳಿ ಕೊರೊನಾ ಬಗ್ಗೆ ತಿಳಿವಳಿಕೆ ಮೂಡಿಸಿದ್ದಾರೆ.

ನೂತನ ದಂಪತಿಗೆ ಕೊರೊನಾ ಜಾಗೃತಿ ಮೂಡಿಸಿದ ಕಲಾವಿದ

ಹೆಚ್ಚು ಜನ ಸೇರುವ ಸ್ಥಳಗಳಿಗೆ ಹೋಗಿ ಕೊರೊನಾ ನಿಯಂತ್ರಿಸಲು ಮಾಸ್ಕ್ ಹಾಗೂ ಸಾಮಾಜಿಕ‌ ಅಂತರ ಕಾಯ್ದುಕೊಂಡು ವೈರಸ್ ವಿರುದ್ದ ಹೋರಾಡಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ‌ಕೊರೊನಾ ಕುರಿತು ತಿಳಿವಳಿಕೆ ಮೂಡಿಸುತ್ತಿದ್ದು, ಜಿಲ್ಲೆಯಲ್ಲಿ ಕೂಡಾ ವೈರಸ್ ಹಾವಳಿ ಐನೂರರ ಗಡಿ ದಾಟುತ್ತಿದೆ.

Last Updated : Apr 26, 2021, 6:20 PM IST

ABOUT THE AUTHOR

...view details