ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಕೆಲಗೇರಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಗ್ರಾಮವನ್ನು ಲಾಕ್ಡೌನ್ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.
ಧಾರವಾಡ; ಕೆಲಗೇರಿ ಗ್ರಾಮದಲ್ಲಿ ಸ್ವಯಂಪ್ರೇರಿತ ಲಾಕ್ಡೌನ್! - Corona in Dharwad
ಧಾರವಾಡ ಜಿಲ್ಲೆಯ ಕೆಲಗೇರಿ ಗ್ರಾಮದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ, ಗ್ರಾಮವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡುವಂತೆ ಸ್ವತಃ ಗ್ರಾಮಸ್ಥರೇ ನಿರ್ಧರಿಸಿದ್ದಾರೆ.
![ಧಾರವಾಡ; ಕೆಲಗೇರಿ ಗ್ರಾಮದಲ್ಲಿ ಸ್ವಯಂಪ್ರೇರಿತ ಲಾಕ್ಡೌನ್! Corona appearing in the village](https://etvbharatimages.akamaized.net/etvbharat/prod-images/768-512-7968863-324-7968863-1594402777508.jpg)
ಧಾರವಾಡದ ಕೆಲಗೇರಿ ಗ್ರಾಮದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಕೇಸ್ ಗಳು ದೃಢಪಟ್ಟ ಹಿನ್ನೆಲೆ, ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ನಿನ್ನೆ ರಾತ್ರಿ ಗ್ರಾಮಸ್ಥರೆಲ್ಲ ಒಂದೆಡೆ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಲಾಕ್ಡೌನ್ ಬಗ್ಗೆಯೂ ತಿಳಿಸಿ ಹೇಳಿದ್ದಾರೆ.
ಅನಗತ್ಯವಾಗಿ ಯಾರೂ ಮನೆಯಿಂದ ಹೊರಬರಬೇಡಿ, ಮದುವೆ ಸೇರಿದಂತೆ ದೊಡ್ಡ ಸಭೆ ಸಮಾರಂಭಗಳಿಗೆ ಹೋಗಬೇಡಿ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ರೋಗದ ವಿರುದ್ದ ಹೋರಾಡಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸುತ್ತಿದ್ದಾರೆ.