ಕರ್ನಾಟಕ

karnataka

ETV Bharat / state

ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಅಂಟಿದ ಕೊರೊನಾ ; ಜಿಲ್ಲಾಧಿಕಾರಿಯಿಂದ ಹೊಸ ಐಡಿಯಾ!! - ಜಿಲ್ಲಾಧಿಕಾರಿಯಿಂದ ಹೊಸ ಐಡಿಯಾ

ಸರ್ಕಾರಿ ಕಚೇರಿಗಳಲ್ಲಿ ಸೋಂಕು ಕಂಡು ಬರುತ್ತಿರುವ ಹಿನ್ನೆಲೆ, ಸಾರ್ವಜನಿಕರು ದೂರದ ಊರುಗಳಿಂದ ಕಚೇರಿಗೆ ಬಾರದೇ ವಾಟ್ಸ್ಆ್ಯಪ್ ನಂಬರ್ 9449847641ಗೆ ತಮ್ಮ ಮನವಿ ಮಾಡಿಕೊಂಡ್ರೆ ಅದನ್ನು ಪರಿಶೀಲಿಸಿ, ವಾಟ್ಸ್‌ಆ್ಯಪ್​​ ಮೂಲಕ ಪ್ರತಿಕ್ರಿಯೆ ಕಳುಹಿಸಲಾಗುತ್ತದೆ..

Deputy commissioner
ನಿತೇಶ್​ ಪಾಟೀಲ್​

By

Published : Jul 8, 2020, 9:24 PM IST

ಧಾರವಾಡ :ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಬರದೆ ವಾಟ್ಸ್‌ಆ್ಯಪ್​​ ಅಥವಾ ಇ-ಮೇಲ್ ಮಾಡಿದ್ರೆ ಸಾಕು ಜನರ ಕೆಲಸವಾಗುವಂತಹ ದಾರಿಯನ್ನು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬರುವ ಜನರಿಗೆ ತೊಂದರೆಯಾಗದಂತೆ ಈ ರೀತಿ ಮಾಡಲಾಗಿದೆ. ಜನರು ತಾವು ಇರುವ ಸ್ಥಳದಿಂದ ಒಂದು ವಾಟ್ಸ್‌ಆ್ಯಪ್​ ಅಥವಾ ಇ-ಮೇಲ್ ಮೂಲಕ ತಮ್ಮ ದಾಖಲಾತಿ ಪತ್ರಗಳನ್ನು ಕಳುಹಿಸಿದ್ರೆ ಸಾಕು, ಸ್ಥಳಕ್ಕೆ ಬರುವ ಬದಲು ತಂತ್ರಜ್ಞಾನದ ಮೂಲಕವೇ ಜನರ ಕೆಲಸ ಆಗುತ್ತದೆ.

ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​

ಸರ್ಕಾರಿ ಕಚೇರಿಗಳಲ್ಲಿ ಸೋಂಕು ಕಂಡು ಬರುತ್ತಿರುವ ಹಿನ್ನೆಲೆ, ಸಾರ್ವಜನಿಕರು ದೂರದ ಊರುಗಳಿಂದ ಕಚೇರಿಗೆ ಬಾರದೇ ವಾಟ್ಸ್ಆ್ಯಪ್ ನಂಬರ್ 9449847641ಗೆ ತಮ್ಮ ಮನವಿ ಮಾಡಿಕೊಂಡ್ರೆ ಅದನ್ನು ಪರಿಶೀಲಿಸಿ, ವಾಟ್ಸ್‌ಆ್ಯಪ್​​ ಮೂಲಕ ಪ್ರತಿಕ್ರಿಯೆ ಕಳುಹಿಸಲಾಗುತ್ತದೆ ಎಂದರು.

ಯಾರೂ ಕೂಡ ದೂರದ ಊರಿನಿಂದ ಜಿಲ್ಲಾ ಕೇಂದ್ರಕ್ಕೆ ಬರುವುದು ಬೇಡ ಎಂದು ರೈತರಿಗೆ ಹಾಗೂ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ಈ ಹೊಸ ಐಡಿಯಾದಿಂದ ರೈತರು ಹಾಗೂ ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತು ತಮ್ಮ ಕೆಲಸ ಮಾಡಿಕೊಳ್ಳಬಹುದಾಗಿದೆ.

ABOUT THE AUTHOR

...view details