ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಐವರ ಪೈಕಿ ಒಬ್ಬ ಕೊರೊನಾ ಶಂಕಿತನ ವರದಿ ಬಾಕಿ - Corona affect in Dharwad

ಧಾರವಾಡದಲ್ಲಿ ಇಲ್ಲಿಯವರೆಗೆ ಒಟ್ಟು 41 ಜನರಲ್ಲಿ ಕೊರೊನಾ ನೆಗಟಿವ್ ವರದಿ ಬಂದಿದೆ. ಒಬ್ಬರಲ್ಲಿ ಮಾತ್ರ ಪಾಸಿಟಿವ್ ವರದಿ ಬಂದಿದೆ.

Corona affect in Dharwad
ಧಾರವಾಡದಲ್ಲಿ ಐವರ ಪೈಕಿ ಓರ್ವನಲ್ಲಿ ಕೊರೊನಾ ಪತ್ತೆ

By

Published : Mar 29, 2020, 7:06 PM IST

ಧಾರವಾಡ: ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಒಬ್ಬರಲ್ಲಿ ಮಾತ್ರ ಶಂಕಿತ ಕೊರೊನಾ ಪ್ರಕರಣ ಪತ್ತೆಯಾಗಿದೆ.

ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಫದ ಮಾದರಿ ರವಾನೆ ಮಾಡಲಾಗಿದೆ. ನಿನ್ನೆ ಬಾಕಿ ಇದ್ದ ಐವರು ಶಂಕಿತರ ಪೈಕಿ ನಾಲ್ವರ ಫಲಿತಾಂಶ ನೆಗೆಟಿವ್ ವರದಿ ಬಂದಿದೆ.‌ ಒಬ್ಬರ ಫಲಿತಾಂಶ ಬಾಕಿಯಿದೆ. ಒಟ್ಟು ಮೂವರಿಗೆ ಆಸ್ಪತ್ರೆಯಲ್ಲಿ ಐಸೊಲೇಷನ್​ನಲ್ಲಿ ಇಡಲಾಗಿದೆ.

ಆರೋಗ್ಯ ಇಲಾಖೆ ಮಾಹಿತಿ

ಇಲ್ಲಿಯವರೆಗೆ ಒಟ್ಟು 489 ಜನರ ಮೇಲೆ‌ ಜಿಲ್ಲಾಡಳಿತ ನಿಗಾವಹಿಸಿದೆ. ಅದರಲ್ಲಿ 180 ಜನರಿಗೆ 14 ದಿನಗಳ ಹೋಮ್ ಐಸೊಲೇಷನ್ 274 ಜನರಿಂದ 14 ದಿನ‌ಗಳ ಹೋಮ್ ಐಸೊಲೇಷನ್ ಪೂರ್ಣಗೊಂಡಿದೆ. 32 ಜನರಿಂದ 28 ದಿನಗಳ‌ ಹೋಮ್ ಐಸೊಲೇಷನ್ ಪೂರ್ಣವಾಗಿದೆ. ಇಲ್ಲಿಯವರೆಗೆ ಒಟ್ಟು 41 ಜನರಲ್ಲಿ ಕೊರೊನಾ ನೆಗಟಿವ್ ವರದಿ ಬಂದಿದೆ. ಒಬ್ಬರಲ್ಲಿ ಮಾತ್ರ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವ್ ವ್ಯಕ್ತಿಗೆ ಒಂದು ವಾರದಿಂದ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details