ಹುಬ್ಬಳ್ಳಿ: ಪರಿಚಯಸ್ಥರಾಗಿದ್ದರೂ ಕೂಡ ತನ್ನ ಬಳಿ ಕೊತ್ತಂಬರಿ ಸೊಪ್ಪು ಖರೀದಿ ಮಾಡಿಲ್ಲವೆಂದು ಸಿಟ್ಟಾದ ವ್ಯಾಪಾರಿಯೊಬ್ಬ ಗ್ರಾಹಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ವಿಚಿತ್ರ ಘಟನೆ ಹಳೇ ಹುಬ್ಬಳ್ಳಿಯ ಗೌಳಿ ಗಲ್ಲಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ಕೊತ್ತಂಬರಿ ಜಗಳ.. ತನ್ನ ಬಳಿ ಸೊಪ್ಪು ಖರೀದಿಸಿಲ್ಲವೆಂದು ಚಾಕು ಇರಿದ ವ್ಯಾಪಾರಿ! - coriander merchant assault on customer
ಮಾರಾಟಕ್ಕಿಟ್ಟಿದ್ದ ಕೊತ್ತಂಬರಿ ಸೊಪ್ಪು ಸರಿಯಿಲ್ಲವೆಂದು ಖರೀದಿಸದ ಗ್ರಾಹಕನಿಗೆ ವ್ಯಾಪಾರಸ್ಥ ಹಾಗೂ ಆತನ ಸಹಚರರು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ವಾಣಿಜ್ಯ ನಗರಿಯಲ್ಲಿ ನಡೆದಿದೆ.
![ಹುಬ್ಬಳ್ಳಿಯಲ್ಲಿ ಕೊತ್ತಂಬರಿ ಜಗಳ.. ತನ್ನ ಬಳಿ ಸೊಪ್ಪು ಖರೀದಿಸಿಲ್ಲವೆಂದು ಚಾಕು ಇರಿದ ವ್ಯಾಪಾರಿ! coriander merchant assult on customer](https://etvbharatimages.akamaized.net/etvbharat/prod-images/768-512-12787435-thumbnail-3x2-lekh.jpg)
ಹಳೇ ಹುಬ್ಬಳ್ಳಿ ಬಾಣತಿಕಟ್ಟಿಯ ಮೆಹಬೂಬನಗರದ ಮೊಹಮ್ಮದ್ಗೌಸ್ ಬಿಜಾಪುರ ಗಾಯಗೊಂಡಿರುವ ಗ್ರಾಹಕ. ಅದೇ ಪ್ರದೇಶದ ವ್ಯಾಪಾರಿ ಖಾದರ್ ಮತ್ತು ಆತನ ಆತನ ಸಹಚರರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊತ್ತಂಬರಿ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದ ಖಾದರ್ ಬಳಿ, ಮೊಹಮ್ಮದ್ಗೌಸ್ ಖಾಯಂ ಆಗಿ ವ್ಯಾಪಾರ ಮಾಡುತ್ತಿದ್ದರು. ಎಂದಿನಂತೆ ತರಕಾರಿ ಖರೀದಿಗೆ ಬಂದಾಗ ಖಾದರ್ ಬಳಿ ಕೊತ್ತಂಬರಿ ಸೊಪ್ಪು ಸರಿಯಿಲ್ಲವೆಂದು ಬೇರೆ ಕಡೆಗೆ ಹೋದಾಗ ಸಿಟ್ಟಾದ ವ್ಯಾಪಾರಿ ಜಗಳ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ, ತನ್ನ ಸಹಚರನೊಂದಿಗೆ ಗೌಸ್ಗೆ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗ್ತಿದೆ. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.