ಹುಬ್ಬಳ್ಳಿ:ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇವೆ. ಇನ್ನುವರೆಗೂ ಯಾವ ಪಕ್ಷಗಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಇದರ ನಡುವೆಯೇ ಕೆಲ ನಾಯಕರು ಈಗಲೇ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮತದಾರರನ್ನು ಸೆಳೆಯಲು ಅನೇಕ ಕಸರತ್ತು ನಡೆಸಿದ್ದಾರೆ.
ಜಿಲ್ಲೆಯಲ್ಲಿಯೇ ಹೈಲ್ಟೋಜ್ ಕ್ಷೇತ್ರ ಎನಿಸಿಕೊಂಡಿರುವ ಕಲಘಟಗಿಯಲ್ಲಿ ಈಗ ರಾಜಕೀಯ ಮೇಲಾಟಗಳು ಜೋರಾಗಿವೆ. ಕಳೆದ ಚುನಾವಣೆಯಲ್ಲಿ ಸಂತೋಷ್ ಲಾಡ್ ಸೋಲು ಕಂಡಿದ್ದರು. ಹೀಗಾಗಿ ಅವರ ಸ್ಥಾನ ಕಿತ್ತುಕೊಂಡು ಚುನಾವಣೆ ಸ್ಪರ್ಧೆ ನಡೆಸಲು ನಾಗರಾಜ ಛಬ್ಬಿ ಹರಸಾಹಸ ನಡೆಸಿದ್ದಾರೆ ಎನ್ನಲಾಗ್ತಿದೆ.
ಕಲಘಟಗಿಯಲ್ಲಿ ಕೈ ನಾಯಕರ ಕುಕ್ಕರ್ ವಿತರಣೆ ಲಾಡ್ ಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡುವ ಮೂಲಕ ತಾವು ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಗುರುತಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಲಘಟಗಿ ತಾಲೂಕಿನ ಹಿರೇ ಹೊನ್ನಳ್ಳಿ ಗ್ರಾಮ ಕಲಘಟಗಿ ಮತ್ತು ಅಳ್ನಾವರ ಭಾಗಕ್ಕೆ ಸುಮಾರು 80 ಸಾವಿರ ಕುಕ್ಕರ್ಗಳನ್ನು ಹಂಚಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರತಿಯೊಂದು ಹಳ್ಳಿಯಲ್ಲೂ ಮನೆಮನೆಗೂ ದೀಪಾವಳಿ ಕೊಡುಗೆ ಎಂದು ನೀಡಲಾಗುತ್ತಿದ್ದು, ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕುಕ್ಕರ್ ವಿತರಣೆ ಮಾಡಿದ್ದು, ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ಬಸ್ ನಿಲ್ದಾಣದ ಗುಂಬಜ್ಗಳನ್ನು ನಾನೇ ಜೆಸಿಬಿಯಿಂದ ಒಡೆದು ಹಾಕುತ್ತೇನೆ: ಸಂಸದ ಪ್ರತಾಪ್ ಸಿಂಹ