ಕರ್ನಾಟಕ

karnataka

ETV Bharat / state

ಠೇವಣಿ ಹಣ ಹಿಂದಿರುಗಿಸದ ಸಹಕಾರಿ ಸಂಸ್ಥೆಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ - ಸಹಕಾರಿ ಸಂಸ್ಥೆಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

ಠೇವಣಿ ಅವಧಿ ಮುಗಿದರೂ ಹಣ ಹಿಂತಿರುಗಿಸದ ಕಾರಣಕ್ಕೆ ಹುಬ್ಬಳ್ಳಿಯ ಸರಸ್ವತಿ ಸಹಕಾರ ಸಂಘಕ್ಕೆ ಬಡ್ಡಿ ಸಮೇತ 13 ಲಕ್ಷ ರೂ. ಠೇವಣಿ ಹಣ ಜೊತೆಗೆ ರೂ. 50 ಸಾವಿರ ಪರಿಹಾರ ಹಾಗೂ ಖರ್ಚಾದ ರೂ.10 ಸಾವಿರವನ್ನು ಗ್ರಾಹಕನಿಗೆ ಕೊಡಲು ಜಿಲ್ಲಾ ಗ್ರಾಹಕರ ಆಯೋಗದ ಆದೇಶಿಸಿದೆ.

consumer-court-fined-for-co-operatives
ಠೇವಣಿ ಹಿಂತಿರುಗಿಸದ ಸಹಕಾರಿ ಸಂಸ್ಥೆಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

By

Published : Oct 17, 2022, 10:43 PM IST

ಧಾರವಾಡ :ಠೇವಣಿ ಅವಧಿ ಮುಗಿದರೂ ಗ್ರಾಹಕರಿಗೆ ಹಣ ಹಿಂತಿರುಗಿಸದ ಸಹಕಾರಿ ಸಂಘಕ್ಕೆ ಸೇವಾ ನೂನ್ಯತೆ ಎಂದು ಪರಿಗಣಿಸಿ ಗ್ರಾಹಕರಿಗೆ ಪರಿಹಾರ ಒದಗಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಹುಬ್ಬಳ್ಳಿ ವಿಕಾಸ ನಗರದ ನಿವಾಸಿ ಶಾರದಾ ಪೈ ಎಂಬವರು ಹುಬ್ಬಳ್ಳಿಯ ಕ್ವಾಯಿನ್ ರಸ್ತೆಯ ಶಾರದಾ ಕಾಂಪ್ಲೆಕ್ಸ್​ನಲ್ಲಿರುವ ಸರಸ್ವತಿ ಕೋ ಆಪರೇಟಿವ್ ಸೊಸೈಟಿಯಲ್ಲಿ 2017ರಿಂದ 2020ರ ಅವಧಿಯಲ್ಲಿ 13,29,544 ಮೊತ್ತವನ್ನು ತಮ್ಮ ಮಗಳ ಮದುವೆಗಾಗಿ ಒಂದು ವರ್ಷದ ಅವಧಿಗೆ 9 ವಿವಿಧ ಮೊತ್ತದ ಖಾಯಂ ಠೇವಣಿ ಇಟ್ಟಿದ್ದರು.

ಆ ಠೇವಣಿ ಅವಧಿ 2018ರಿಂದ 2021ರ ಅವಧಿಯಲ್ಲಿ ಮುಕ್ತಾಯವಾಗಿದ್ದರೂ ತನ್ನ ಠೇವಣಿ ಹಣವನ್ನು ಸೊಸೈಟಿಯವರು ಕೊಡುತ್ತಿಲ್ಲ. ಇದರಿಂದಾಗಿ ತನ್ನ ಮಗಳ ಮದುವೆಗೆ ತೊಂದರೆಯಾಗಿದೆ. ಅದಲ್ಲದೆ ಸೊಸೈಟಿಯವರ ವರ್ತನೆಯಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಸೊಸೈಟಿಯವರು ಹಾಜರಾಗಿ ಕೋವಿಡ್​ನಿಂದ ತಮ್ಮ ವ್ಯವಹಾರ ನಿಂತು ನಷ್ಟ ಉಂಟಾಗಿದೆ. ಅಲ್ಲದೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಪರಿಹಾರ ನೀಡಲು ಇದು ಯೋಗ್ಯವಾದ ಪ್ರಕರಣ ಅಲ್ಲ ಎಂದು ಆಕ್ಷೇಪಣೆ ಸಲ್ಲಿಸಿತ್ತು. ದೂರು ಮತ್ತು ಸೊಸೈಟಿಯ ಆಕ್ಷೇಪಣೆಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಸದಸ್ಯರು, ಸಹಕಾರ ಸಂಘದವರ ಆಕ್ಷೇಪಣೆಯನ್ನು ತಳ್ಳಿಹಾಕಿ ಠೇವಣಿ ಅವಧಿ ಮುಗಿದರೂ ದೂರುದಾರರ ಠೇವಣಿ ಹಣವನ್ನು ಹಿಂದಿರುಗಿಸದೇ ಇರುವುದನ್ನು ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ಆಯೋಗ ತೀರ್ಪು ನೀಡಿದೆ.

ಠೇವಣಿ ಇಟ್ಟ ದಿನಾಂಕದಿಂದ ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಠೇವಣಿ ಹಣ 13,29,544 ರೂ. ಗಳನ್ನು ದೂರುದಾರರಿಗೆ ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ಅವರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.50 ಸಾವಿರ ಪರಿಹಾರ ಹಾಗೂ ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.

ಇದನ್ನೂ ಓದಿ :ಕಾಂಗ್ರೆಸ್​ಗೆ ಗಜೇಂದ್ರ ಮೋಕ್ಷ ಸಿಕ್ಕಿದೆ: ಭಾರತ್​ ಜೋಡೋ ಯಾತ್ರೆ ಬಗ್ಗೆ ಸಂಸದರ ಲೇವಡಿ

ABOUT THE AUTHOR

...view details