ಧಾರವಾಡ:ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ಗೆ ಧಾರವಾಡ ಜಿಲ್ಲಾ ಆಯೋಗವು 64.011 ಗ್ರಾಂ ತೂಕದ ಚಿನ್ನ ಮತ್ತು ರೂ.35,000 ಪರಿಹಾರ ನೀಡುವಂತೆ ಆದೇಶಿಸಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರ ಚಿದಂಬರ ನಗರದ ನಿವಾಸಿ ಸತೀಶ ಇಜಂತಕರ ಎಂಬವರು ತಮ್ಮ ಮಗಳು ಬನಶ್ರೀ ಹೆಸರಿನಲ್ಲಿ ಆದಿತ್ಯ ಗೋಲ್ಡ್ ಪರ್ಚೇಜ್ ಯೋಜನೆಯಡಿ ಒಟ್ಟು 19 ಕಂತುಗಳಲ್ಲಿ 2,00,000 ರೂ ಬಂಗಾರದ ಆಭರಣ ಪಡೆಯಲು ಹಣ ಕಟ್ಟಿದ್ದರು. ಹಣಕ್ಕೆ ಸಮಾನಾಂತರವಾಗಿ ಒಟ್ಟು 64.011 ಗ್ರಾಂ ಬಂಗಾರವನ್ನು, ಯೋಜನಾ ಅವಧಿ ಮುಕ್ತಾಯವಾದರೂ ಹಿಂದಿರುಗಿಸದೇ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.