ಧಾರವಾಡ:ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇನ್ನೆರಡು ತಿಂಗಳಲ್ಲಿ ಇನ್ನೋವೇಶನ್ ಪಾರ್ಕ್ ನಿರ್ಮಾಣವಾಗಲಿದ್ದು ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ವಿವಿ ಕುಲಪತಿ ಮಹಾದೇವ ಚೆಟ್ಟಿ ಮಾಹಿತಿ ನೀಡಿದ್ದಾರೆ.
ಧಾರವಾಡ: ಶೀಘ್ರ ಕೃಷಿ ವಿವಿಯಲ್ಲಿ ಇನ್ನೋವೇಶನ್ ಪಾರ್ಕ್ ನಿರ್ಮಾಣ - Dharwad Agricultural University
ಇನ್ನೂ ಎರಡು ತಿಂಗಳಲ್ಲಿ ಕೃಷಿ ವಿಶ್ವ ವಿದ್ಯಾಲಯದಲ್ಲಿ ಇನ್ನೋವೇಶನ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಕುಲಪತಿ ಮಹಾದೇವ ಚೆಟ್ಟಿ ಹೇಳಿದರು.
![ಧಾರವಾಡ: ಶೀಘ್ರ ಕೃಷಿ ವಿವಿಯಲ್ಲಿ ಇನ್ನೋವೇಶನ್ ಪಾರ್ಕ್ ನಿರ್ಮಾಣ Construction of Innovation Park](https://etvbharatimages.akamaized.net/etvbharat/prod-images/768-512-9122117-27-9122117-1602330862857.jpg)
ಇನ್ನೋವೇಶನ್ ಪಾರ್ಕ್ ನಿರ್ಮಾಣ
ಇನ್ನೊವೇಶನ್ ಲ್ಯಾಬ್ ನಿರ್ಮಾಣ ಮಾಡುವುದಾಗಿ ವಿಶ್ವಬ್ಯಾಂಕ್ ತಂಡಕ್ಕೆ ಆಶ್ವಾಸನೆ ನೀಡಿದ್ದೇವೆ. ಅದರ ಕಾರ್ಯ ಪ್ರಗತಿಯಲ್ಲಿದೆ. ಲ್ಯಾಬ್ಗಳು ಯಾವ ರೀತಿ ನಿರ್ವಹಿಸಬೇಕು ಎಂಬುದು ಸೇರಿದಂತೆ ವಿಸ್ತೃತವಾದ ವರದಿ ಸಿದ್ದಪಡಿಸಲಾಗಿದೆ ಎಂದರು.
ವಿವಿ ಕುಲಪತಿ ಮಹಾದೇವ ಚೆಟ್ಟಿ
ವಿದ್ಯಾರ್ಥಿಗಳಿಗೆ ಸ್ಟಾರ್ಟ್ಅಪ್ ಉತ್ತೇಜನ ನೀಡಲು ಬಹಳ ಅನುಕೂಲವಾಗಲಿದೆ. ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ತರಬೇತಿ, ವೆಬಿನಾರ್ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದಲೂ ಕೋಟಿಗಟ್ಟಲೇ ಅನುದಾನ ಬಂದಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಸ್ಟಾರ್ಟ್ಅಪ್ ಕುರಿತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.