ಹುಬ್ಬಳ್ಳಿ: ಹೈದರ ಶಾ ವಲಿ ದರ್ಗಾವನ್ನು ಸುನ್ನಿ ಮಂಡಳಿಯಿಂದ ಹುಬ್ಬಳ್ಳಿ ನಗರದ ಪೆಂಡಾರ ಗಲ್ಲಿಯಲ್ಲಿ ಕಟ್ಟಲು ಪರವಾನಗಿ ಕೋರಲಾಗಿದೆ.
ಧಾರ್ಮಿಕ ಕಟ್ಟಡ ನಿರ್ಮಾಣ: ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ - Hubli sunni organisation dargha construction news
ಹೈದರ ಶಾ ವಲಿ ದರ್ಗಾ ಕಟ್ಟಡ ನಿರ್ಮಾಣದ ಬಗ್ಗೆ ಏನಾದರೂ ಪ್ರತಿಕ್ರಿಯೆ ಇದ್ದಲ್ಲಿ 15 ದಿನದೊಳಗಾಗಿ ಹುಬ್ಬಳ್ಳಿ ಧಾರವಾಡ ನಗರ ಯೋಜನಾ ಉಪ ನಿರ್ದೇಶಕರು, ಮಹಾನಗರ ಪಾಲಿಕೆಗೆ ಲಿಖಿತವಾಗಿ ಮನವಿ ಸಲ್ಲಿಸುವಂತೆ ಸೂಚಿಸಲಾಗಿದೆ.

Hubli
ಪೆಂಡಾರ ಗಲ್ಲಿಯ ಸಿ.ಟಿ.ಎಸ್. ನಂ. 1373 & 1374 ಹಾಗೂ ವಾರ್ಡ್ ನಂ. 45, ಸಿಐಡಿ ನಂ. 45 ಎ, 1427 ನೇದ್ದರ ನಿವೇಶನದ 96.90 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ಧಾರ್ಮಿಕ ಉದ್ದೇಶದ ಕಟ್ಟಡ ಕಟ್ಟಲು ಸುನ್ನಿ ಮಂಡಳಿ ಪರವಾನಗಿ ಕೋರಿದ್ದಾರೆ.
ಈ ಕಟ್ಟಡ ನಿರ್ಮಾಣದ ಬಗ್ಗೆ ಏನಾದರೂ ಪ್ರತಿಕ್ರಿಯೆ ಇದ್ದಲ್ಲಿ 15 ದಿನದೊಳಗಾಗಿ ಹುಬ್ಬಳ್ಳಿ ಧಾರವಾಡ ನಗರ ಯೋಜನಾ ಉಪ ನಿರ್ದೇಶಕರು, ಮಹಾನಗರ ಪಾಲಿಕೆ ಇವರಿಗೆ ಲಿಖಿತವಾಗಿ ಸಲ್ಲಿಸಬಹದು. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
TAGGED:
ಹುಬ್ಬಳ್ಳಿ ಹೈದರ ಶಾ ವಲಿ ದರ್ಗಾ