ಹುಬ್ಬಳ್ಳಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗಾಳಿ ದುರ್ಗಮ್ಮ ದೇವಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಬ್ಯಾರಿಕೇಡ್ ಹಾಕಿ ತಡೆಯಲಾಗಿದೆ. ಆದ್ರೆ ಕೇಶ್ವಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ದೇವಾಲಯ ಪ್ರವೇಶಕ್ಕೆ ತಡೆ: ಎಎಸ್ಐ-ಕಾನ್ಸ್ಟೇಬಲ್ ನಡುವೆ ಮಾತಿನ ಚಕಮಕಿ - Keshwapur Police Station Hubli
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗಾಳಿ ದುರ್ಗಮ್ಮ ದೇವಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿದ್ದು, ದೇವಾಲಯದ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ನಡುವೆಯೂ ಕೇಶ್ವಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರು ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಎಎಸ್ಐ ಒಳಗೆ ಹೋಗದಂತೆ ತಡೆದಿದ್ದಾರೆ.
ಎಎಸ್ಐ ಜೊತೆ ಕಾನ್ಸ್ಟೇಬಲ್ ವಾದ
ದೇವಾಲಯಕ್ಕೆ ತೆರಳುತ್ತಿದ್ದ ಕಾನ್ಸ್ಟೇಬಲ್ ಗುಳೇಶ್ರನ್ನು ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಒಳಗೆ ಹೋಗದಂತೆ ತಡೆದಿದ್ದಾರೆ. ಆದ್ರೆ ಅವರಿಗೆ ದಬಾಯಿಸಿ ಗುಳೇಶ್ ಬ್ಯಾರಿಕೇಡ್ ತೆಗೆದು ಒಳ ಹೋಗಲು ಮುಂದಾದಾಗ ಅಲ್ಲೇ ಇದ್ದ ಎಎಸ್ಐ ಒಳಗೆ ಹೋಗದಂತೆ ತಡೆದಿದ್ದಾರೆ.
ಈ ಸಮಯದಲ್ಲಿ ಎಎಸ್ಐ ಹಾಗೂ ಕಾನ್ಸ್ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿದೆ.