ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಕುಲಕರ್ಣಿ ಸಿಬಿಐ ವಶಕ್ಕೆ: ಠಾಣೆ ಎದುರು ಜಮಾವಣೆಗೊಂಡ ಕಾಂಗ್ರೆಸಿಗರು

ಮಾಜಿ ಸಚಿವ ವಿನಯ್​​ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡಿದ್ದಾರೆ.

congress leaders and activists came to darwad police station
ಮಾಜಿ ಸಚಿವ ಕುಲಕರ್ಣಿ ಸಿಬಿಐ ವಶಕ್ಕೆ: ಠಾಣೆ ಎದುರು ಜಮಾವಣೆಗೊಂಡ ಕಾಂಗ್ರೆಸಿಗರು

By

Published : Nov 5, 2020, 9:28 AM IST

Updated : Nov 5, 2020, 9:52 AM IST

ಧಾರವಾಡ: ಜಿಲ್ಲಾ ಪಂಚಾಯತ್​​​ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್​​ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಠಾಣೆಯ ಎದುರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.

ಠಾಣೆ ಎದುರು ಜಮಾವಣೆಗೊಂಡ ಕಾಂಗ್ರೆಸಿಗರು

ಸಹೋದರ ವಿಜಯ್​​​ ಕುಲಕರ್ಣಿ ಅವರನ್ನು ಸಹ ಜನ್ಮದಿನಕ್ಕೂ ಮೊದಲು ವಿಚಾರಣೆ ನಡೆಸಿದ್ದರು. ಅದೇ ರೀತಿ ಮಾಜಿ ಸಚಿವರನ್ನು ಸಹ ಜನ್ಮ ದಿನಕ್ಕೆ ಎರಡು ದಿನ ಮುಂಚೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ 2019ರ ಸಪ್ಟೆಂಬರ್ 7 ರಂದು ರಾಜ್ಯ ಸರ್ಕಾರ ಸಿಬಿಐ ವಿಚಾರಣೆಗೆ ಶಿಫಾರಸು ಮಾಡಿತ್ತು. ಅದೇ ತಿಂಗಳು 28ರಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು. 2019ರ ಸಪ್ಟೆಂಬರ್ 28 ರಂದು ಮೃತ ಯೋಗೇಶಗೌಡ ಸಹೋದರ ಗುರುನಾಥ ಗೌಡ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದ್ದರು.

ಯೋಗೇಶ್​ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್​ ಕುಲಕರ್ಣಿ ಸಿಬಿಐ ವಶಕ್ಕೆ!

ಸದ್ಯ ಮಾಜಿ‌ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದ ಹಿನ್ನೆಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಎದುರು ನಾಯಕರು ಹಾಗೂ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.

Last Updated : Nov 5, 2020, 9:52 AM IST

ABOUT THE AUTHOR

...view details