ಕರ್ನಾಟಕ

karnataka

ETV Bharat / state

ಜನ್ಮದಿನದ ಪ್ರಯುಕ್ತ ಆಹಾರ ಕಿಟ್ ಹಂಚಿಕೆ : ಜನರಿಂದ ನೂಕುನುಗ್ಗಲು - congress leader Ismail tamatagara news

ಜನ್ಮದಿನದ ಪ್ರಯುಕ್ತ ಕಾಂಗ್ರೆಸ್​​ ಮುಖಂಡ ಇಸ್ಮಾಯಿಲ್ ತಮಟಗಾರ ಧಾರವಾಡದಲ್ಲಿ ಸಾರ್ವಜನಿಕರಿಗೆ ಫುಡ್​​ ಕಿಟ್​ ಹಂಚುವ ವೇಳೆ ಕೊರೊನಾ ನಿಯಮ ಪಾಲಿಸದೇ ಯಡವಟ್ಟು ಮಾಡಿಕೊಂಡಿದ್ದಾರೆ..

Ismail
ಇಸ್ಮಾಯಿಲ್ ತಮಟಗಾರ

By

Published : Jun 28, 2021, 3:29 PM IST

ಧಾರವಾಡ: ಜನ್ಮದಿನದ ಪ್ರಯುಕ್ತ ಕಾಂಗ್ರೆಸ್​​ ಮುಖಂಡರೊಬ್ಬರು ಕಿಟ್ ಹಂಚುವ ವೇಳೆ ನೂಕುನುಗ್ಗಲು ಉಂಟಾದ ಹಿನ್ನೆಲೆ ಕೋವಿಡ್​ ನಿಯಮ ಉಲ್ಲಂಘನೆಯಾದ ಘಟನೆ ನಡೆದಿದೆ.

ನಗರದ ಮುರುಘಾಮಠದ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರು ತಮ್ಮ‌ ಹುಟ್ಟುಹಬ್ಬದ ಅಂಗವಾಗಿ ಜನರಿಗೆ ಆಹಾರದ ಕಿಟ್ ಹಂಚಲು ಮುಂದಾಗಿದ್ದಾರೆ. ಆದರೆ, ಈ ವೇಳೆ ನೂರಾರು ಜನ ಸೇರಿದ ಪರಿಣಾಮ ನೂಕುನುಗ್ಗಲು ಸಂಭವಿಸಿದೆ.

ಜನರಿಗೆ ಆಹಾರ ಕಿಟ್ ಹಂಚಿಕೆ

ಕಿಟ್ ಪಡೆಯಲು ಜನರು ಗುಂಪು ಗುಂಪಾಗಿ ಆಗಮಿಸಿ ಕಿಟ್ ಸ್ವೀಕರಿಸಲು ಮುಗಿಬೀಳುವ ಮೂಲಕ ಕೊರೊನಾ ನಿಯಮವನ್ನು ಗಾಳಿಗೆ ತೂರಿದ್ದಾರೆ. ಜನರ ವರ್ತನೆಯಿಂದ ಕೆಲ ಹೊತ್ತು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

ಜನರಿಗೆ ಮಾನವೀಯತೆಯಿಂದ ತಮಟಗಾರ ಅವರು ಸಹಾಯ ಮಾಡ್ತಿರುವುದು ಮೆಚ್ಚುವ ಕಾರ್ಯ. ಅದೇ ವೇಳೆ ಸಾಂಕ್ರಾಮಿಕ ರೋಗ ಬಾಧಿಸ್ತಿರುವ ಈ ಸಂದರ್ಭದಲ್ಲಿ ಮುಂಜಾಗರೂಕತಾ ಕ್ರಮಗಳನ್ನ ಕೈಗೊಳ್ಳಬೇಕಿರೋದು ಅಷ್ಟೇ ಅವಶ್ಯ..

ಇದನ್ನೂ ಓದಿ: ರಾಯರ ಭಕ್ತರಿಗೆ ಸಿಹಿ ಸುದ್ದಿ.. ರಾಘವೇಂದ್ರ ಸ್ವಾಮಿ ದರ್ಶನಕ್ಕಿಲ್ಲ ಸಮಸ್ಯೆ

ABOUT THE AUTHOR

...view details