ಧಾರವಾಡ:ಮಹಿಳಾ ಬ್ಯೂಟಿಷಿಯನ್ ಜೊತೆ ಕಾಂಗ್ರೆಸ್ ಮುಖಂಡನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ಧಾರವಾಡದ ವಿದ್ಯಾಗಿರಿ ಬಡಾವಣೆಯಲ್ಲಿ ನಡೆದಿದೆ.
ಸೆಲೂನ್ ಹಾಗೂ ಸ್ಪಾ ಮಾಲೀಕನೂ ಆಗಿರುವ ಮನೋಜ್ ಕರ್ಜಗಿ (54) ಎಂಬಾತ ಆರೋಪಿ. ಸಿದ್ದರಾಮಯ್ಯ ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕನಾಗಿದ್ದ ಈತ, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಎಂದು ಹೇಳಲಾಗಿದೆ.