ಹುಬ್ಬಳ್ಳಿ:ಹುಬ್ಬಳ್ಳಿಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಕಾರ್ಯವೈಖರಿಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಮಳೆ ಸುರಿದು ಅತಿವೃಷ್ಟಿ ನಡೆದ ಸಂದರ್ಭದಲ್ಲಿ ಸಿನೆಮಾ ಪ್ರಮೋಷನ್ ಮಾಡಿದ್ದರು. ಈ ಬಾರಿ ಮನೆಗೆ ನೀರು ನುಗ್ಗಿ ನಮ್ಮ ಜೀವನ ಅಸ್ತವ್ಯಸ್ತಗೊಂಡರೂ ಮಾಜಿ ಸಿಎಂ ಭೇಟಿ ನೀಡಿಲ್ಲ. ಸೌಜನ್ಯಕ್ಕೆ ಆದರೂ ನಮ್ಮ ಸಮಸ್ಯೆ ಆಲಿಸಬೇಕಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿ ಅವರ ನಿವಾಸದ ಮುಂದೆ ಭಜನೆ ಮಾಡಿದರು.
ಜಗದೀಶ್ ಶೆಟ್ಟರ್ ಮನೆಗೆ ಮುತ್ತಿಗೆ ಹಾಕಿ ಓಂ ನಮಃ ಶಿವಾಯ ಭಜನೆ ಓಂ ಶಿವಾಯ ನಮಃ ಎನ್ನುವ ನಾಮದೇಯದೊಂದಿಗೆ ಪ್ರತಿಭಟನೆ ನಡೆಸಿದ ಹತ್ತಾರು ಕಾಂಗ್ರೆಸ್ ಕಾರ್ಯಕರ್ತರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಕಾರ್ಪೊರೇಟರ್ ಸುವರ್ಣ ಕಳ್ಳಕುಂಠಲ ಸಾತ್ ನೀಡಿದರು.
ಇನ್ನು ಒಂದು ಗಂಟೆ ಪ್ರತಿಭಟನೆ ನಡೆಸಿದರೂ ಕೂಡ ಜಗದೀಶ್ ಶೆಟ್ಟರ್ ಮನವಿ ಸ್ವೀಕರಿಸಲು ಬರಲಿಲ್ಲ. ಈ ಬಗ್ಗೆ ಮನವಿಯನ್ನು ಆಪ್ತರಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಪ್ರತಿಭಟನಾಕಾರರು ಜಗ್ಗದೆ ಮನೆಯ ಮುಂದೆ ಭಜನೆ ಮುಂದುವರೆಸಿದ್ದಾರೆ.
ಓದಿ:ಚಿಕ್ಕಮಗಳೂರು.. ಮಾಲೀಕನಿಂದ ಗರ್ಭಿಣಿ ಮೇಲೆ ಹಲ್ಲೆ.. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು